Breaking
25 Sep 2026, Fri

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ – ಜೂನ್ 22 ರಂದು 3871 ಅಗೆಲು ಸೇವೆ

ಬಂಟ್ವಾಳ: ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅತೀ ಹೆಚ್ಚು ಅಗೆಲು ಸೇವೆ ಜೂನ್ 22 ರಂದು ನಡೆದಿದೆ ಎಂದು ದೈವಸ್ಥಾನದ ಅಧಿಕೃತ ಮಾಹಿತಿ ತಿಳಿಸಿದೆ.

ಕಳೆದ ವರ್ಷ ಕೂಡ ಜೂನ್ ತಿಂಗಳಿನಿಂದ ಅಗಸ್ಟ್ ತಿಂಗಳ ವರೆಗೆ ಇದೇ ಮಾದರಿಯಲ್ಲಿ ಅಗೆಲು ಸೇವೆ ನಡೆದಿದ್ದು, ಕಳೆದ ವರ್ಷ ಜೂನ್ 2 ರಂದು 3908 ಅಗೆಲು ಸೇವೆ ನಡೆದಿತ್ತು. ಈ ವರ್ಷ ಜೂನ್ 22 ರಂದು ಒಟ್ಟು 3871 ಅಗೆಲು ಸೇವೆ ನಡೆದಿದೆ ಎಂದು ತಿಳಿಸಿದ್ದಾರೆ.

ಪ್ರತಿ ವರ್ಷ ಆಟಿ ತಿಂಗಳಲ್ಲಿ ಅತೀ ಹೆಚ್ಚು ಅಗೆಲು ಸೇವೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ. ವಾರದ ಮೂರು ದಿನ ಅಂದರೆ ಆದಿತ್ಯವಾರ ,ಮಂಗಳವಾರ ಮತ್ತು ಶುಕ್ರವಾರ ಮೂರು ದಿನಗಳ ಕಾಲ ಇಲ್ಲಿ ಅಗೆಲು ಸೇವೆ ನಡೆಯುತ್ತದೆ.

Leave a Reply

Your email address will not be published. Required fields are marked *