Breaking
16 Jul 2026, Thu

ವಿಟ್ಲದ ಉಕ್ಕುಡದಲ್ಲಿ ಅರ್ಚಕರ ಮನೆಗೆ ಕಳ್ಳರು ನುಗ್ಗಿ 2 ಪವನ್ ಚಿನ್ನಾಭರಣ ದೋಚಿ ಪರಾರಿ

ವಿಟ್ಲ: ಉಕ್ಕುಡ ಎಂಬಲ್ಲಿ ತಡರಾತ್ರಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜೂನ್ 20 ರಂದು ನಡೆದಿದೆ.

ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಉಕ್ಕುಡ ನಿವಾಸಿ ರಜತ್ ಭಟ್‌ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ತಡರಾತ್ರಿ ಮನೆಗೆ ನುಗ್ಗಿ ಖದೀಮರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಿವಿ ಓಲೆ ಮತ್ತು ಸರ ದೋಚಿ ಒಟ್ಟು 2 ಪವನ್‌ ಚಿನ್ನಾಭರಣ ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *