Breaking
22 Mar 2026, Sun

ಸಂಘಟನೆಯ ಪ್ರಮುಖರ ಜೊತೆ ರಾತ್ರಿ ಪೋಲಿಸ್ ಸಂಪರ್ಕ ಮಾಡದಂತೆ ಪ್ರಭಾಕರ ಪ್ರಭು ಮನವಿ

ದ.ಕ : ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಕೆಲವೊಂದು ಕೊಲೆ ಮತ್ತಿತರರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಹತ್ತೋಟಿಗೆ ತರುವ ನಿಟ್ಟಿನಲ್ಲಿ ದ.ಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ವಿವಿಧ ಸಂಘಟನೆಗಳ ಪ್ರಮುಖರ ಮನೆಗಳಿಗೆ ಪೋಲಿಸರು ಸಂಪರ್ಕ ಮಾಡಿ ಜಿ. ಪಿ. ಎಸ್ ಪೋಟೋ ತೆಗೆಸಿಕೊಂಡು ಬರುವ ಬಗ್ಗೆ ಹೊರಡಿಸಿದ ಆದೇಶ ಹಿನ್ನಲೆಯಲ್ಲಿ ದ.ಕನ್ನಡ ಜಿಲ್ಲಾದಾದ್ಯಂತ ಪೋಲಿಸರು ತಡರಾತ್ರಿ, ನಡುರಾತ್ರಿ ಸಂಬಂಧಪಟ್ಟವರ ಮನೆಗಳಿಗೆ ಹೋಗಿ ಜಿ.ಪಿ.ಎಸ್ ಪೋಟೋ ತೆಗೆಸಿಕೊಂಡು ಬರುತ್ತಿರುವುದರಿಂದ ಅಮಾಯಕರ ಪೋಷಕರು ಹಾಗೂ ವೃದ್ದ ತಂದೆ ತಾಯಿ ಕುಟುಂಬಸ್ಥರು ಭಯಭೀತರಾಗುತ್ತಿದ್ದಾರೆ.

ಪೋಲಿಸರ ಭೇಟಿ ನಂತರ ಕೆಲವೊಂದು ಮನೆಯಲ್ಲಿನ ವಯೋವ್ರದ್ದರು ದಿಗ್ಬ್ರಮೆ ಗೊಂಡು ಆಹಾರ ಸರಿಯಾಗಿ ತೆಗೆದುಕೊಳ್ಳದೆ ಆರೋಗ್ಯದ ಮೇಲೆ ಏರುಪೇರು ಆಗುವ ಸಾಧ್ಯತೆಗಳಿವೆ.

ಹೃದಯ ಸಂಬಂಧಿ ಕಾಯಿಲೆಯವರ ರಕ್ತದೊತ್ತಡ ಹೆಚ್ಚಾಗುತ್ತಿದ್ದು ,ಅತೀ ಹೆದರಿಕೆಯಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಉದ್ಬವಿಸಬಹುದು ಎಂದು ಸಾರ್ವಜನಿಕರ ವಲಯಗಳಲ್ಲಿ ಕೇಳಿ ಬರುತ್ತಿದೆ.

ಇಷ್ಟರವರೆಗೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದ ಅಮಾಯಕರ ಮನೆಗಳಿಗೆ ನಡುರಾತ್ರಿ ಪೋಲಿಸರು ಭೇಟಿ ಕೊಡುತ್ತಿರುವುದರಿಂದ ಗ್ರಾಮಾಂತರ ಪ್ರದೇಶದ ಹಳ್ಳಿಗಳಲ್ಲಿ ವಾಸಿಸುವ ಹಿರಿಯರು ಜನಸ್ನೇಹಿ ಪೋಲಿಸ್ ಇಲಾಖೆಯ ಅಧಿಕಾರಿಗಳ ಮೇಲಿಟ್ಟಿರುವ ಗೌರವಕ್ಕೆ ಚ್ಯುತಿ ಉಂಟಾಗುವ ಸಂಭವ ಇರುತ್ತದೆ.

ಈ ನಿಟ್ಟಿನಲ್ಲಿಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಘಟನೆಯ ಪ್ರಮುಖರ ಮನೆ ಭೇಟಿ ಮತ್ತು ಜಿ.ಪಿ.ಎಸ್ ಪೋಟೋ ತೆಗೆಯುವರೇ ರಾತ್ರಿ ಹೋಗುವುದರ ಬದಲಿಗೆ ಹಗಲಿನಲ್ಲಿಯೇ ಹೋಗುವುದರೊಂದಿಗೆ ಹಾಗೂ ಯಾವುದರಲ್ಲೂ ಸಂಬಂಧ ಪಡದ ವ್ಯಕ್ತಿಗಳ ಮನೆ ಸಂಪರ್ಕ ಕೈಬಿಟ್ಟು ಸಮಾಜದ ನಾಗರೀಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡುವ ಅವಶ್ಯಕತೆ ಇದೆ.

ಇಷ್ಟರವರೆಗೆ ಯಾವುದೇ ಪ್ರಕರಣ ,ದೂರುಗಳಲ್ಲಿ ತೊಡಗದೇ ಇರುವವರ ಮನೆ ಭೇಟಿ, ಫೋಟೋ ತೆಗೆಯುವ ಕಾರ್ಯಕ್ರಮ ಅಷ್ಟೊಂದು ಔಚಿತ್ಯ ಪೂರ್ಣ ಲಕ್ಷಣವಲ್ಲವಾಗಿದ್ದು ,ಸಾರ್ವಜನಿಕರನ್ನು ಬೇಕು ಬೇಕಾಂತಲೇ ಇಲಾಖೆಯೇ ರೊಚ್ಚಿಗೆಬ್ಬಿಸುವಂತಿದೆ ಎಂದು ಬಾಸವಾಗುತ್ತಿದೆ.

ಸಾರ್ವಜನಿಕ ವಲಯಗಳಲ್ಲಿ ಸರಕಾರ ಮತ್ತು ಪೊಲೀಸ್ ಇಲಾಖೆಯ ಮೇಲೆ ಅಲ್ಲಲ್ಲಿ ಬೇರೆ ಬೇರೆ ರೀತಿಯಲ್ಲಿ ಅಭಿಪ್ರಾಯಪಡುತ್ತಿದ್ದಾರೆ.

ಆದುದರಿಂದ ಸಾರ್ವಜನಿಕರಲ್ಲಿ ನಿರ್ಭಯ ವಾತಾವರಣ ಮೂಡುವಂತಾಗಲೂ ದಕ್ಷಿಣ ಕನ್ನಡ ಜೆಲ್ಲೆಯ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡುವಂತೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ನಿ.ಬಂಟ್ವಾಳ ದ.ಕನ್ನಡ ಇದರ ಅಧ್ಯಕ್ಷರಾದ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *