ಬಂಟ್ವಾಳ : ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ (ರಿ.) ಬದನಡಿ ಕೊಯಿಲ ಇಲ್ಲಿ ಜೂನ್ 01 ರಂದು ಭಜನಾ ತರಬೇತಿಯ ಉದ್ಘಾಟನೆ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ನಿವೃತ ಶಿಕ್ಷಕರಾದ ನಾರಾಯಣ ನಾಯಕ್ ಕರ್ಪೆ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಂದರ್ ರಾವ್ ಹೊಳ್ಳ ಉದ್ಘಾಟಿಸಿದರು. 180 ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದುರ್ಗದಾಸ್ ಶೆಟ್ಟಿ ಮಾವಂತೂರು, ರಶ್ಮಿತ್ ಶೆಟ್ಟಿ ಕೈತ್ರೋಡಿ, ಪ್ರಭಾಕರ ಪ್ರಭು, ಗಣೇಶ್ ಕಾಮಾಜೆ, ರಾಮಚಂದ್ರ ಶೆಟ್ಟಿಗಾರ್ ಅಣ್ಣಲಿಕೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗದೀಶ್ ಕೊಯಿಲ, ಭಜನಾ ಸಂಗೀತ ಸಾಹಿತ್ಯ ತರಬೇತುದಾರಾದ ಸತೀಶ್ ಪೂಂಜಾ , ಭಜನಾ ನೃತ್ಯ ತರಬೇತುದಾರರಾದ ಗಣೇಶ್ ನೀರ್ಕೆರೆ, ಭಜನಾ ಮಂಡಳಿ ಅಧ್ಯಕ್ಷ ಜನಾರ್ಧನ ಕೊಟ್ಯಾನ್, ಪ್ರಾದ್ಯಾಪಕರಾದ ಮಹೇಶ್ ಕರ್ಕೇರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ಭಜನಾ ಮಂಡಳಿ ಸಂಚಾಲಕರಾದ ರವೀಂದ್ರ ಪೂಜಾರಿ ಹಾಗೂ ಸುಕೇಶ್
ಕಾರ್ಯಕ್ರಮ ನಿರ್ವಹಿಸಿದರು .


