ಸಿದ್ದಕಟ್ಟೆ : ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ರುದ್ರ ಭೂಮಿಯಲ್ಲಿ ಪಂಚಾಯತ್ 15ನೇ ಹಣಕಾಸು ನಿಧಿಯಲ್ಲಿ ನಿರ್ಮಾಣ ಗೊಳ್ಳಲಿರುವ ಲಯಕರ್ತ, ಸ್ಮಶಾನ ವಾಸಿ ರುದ್ರ ಶಿವ ಹಾಗೂ ಸತ್ಯ ಹರಿಶ್ಚಂದ್ರ ಮೂರ್ತಿ ಸ್ಥಾಪನೆಗೆ ಇಂದು ಪಂಚಾಯತ್ ಅಧ್ಯಕ್ಷರು ಶ್ರೀಮತಿ ರಾಜೀವಿ ರವರು ಅಡಿಗಲ್ಲು ಹಾಕುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಕಾರ್ಯದರ್ಶಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



