ಮಂಗಳೂರು: ಪಿಲಿಕುಳ ನಿಸರ್ಗಧಾಮದ ಕಚೇರಿ ಮತ್ತು ಪಿಲಿಕುಳ ವಿಜ್ಞಾನ ಕೇಂದ್ರಕ್ಕೆ ಹಣ ದುರುಪಯೋಗ ಆಗಿರುವ ಆರೋಪದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಮೇ.23ರಂದು ದಿಢೀರ್ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಗಾನಾ ಪಿ. ಕುಮಾರಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಜೈವಿಕ ಉದ್ಯಾನವನ ಮತ್ತು ನಿಸರ್ಗಧಾಮದಲ್ಲಿ ಪ್ರಾಣಿಗಳ ಸಾಗಣೆ,ವಹಿವಾಟು ವಿಚಾರದಲ್ಲಿ ಹಣ ದುರುಪಯೋಗ ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿತ್ತು.ಆದರೆ ಪಿಲಿಕುಳದಲ್ಲಿ ಪೂರ್ಣ ಕಾಲಿಕ ಅಧಿಕಾರಿಗಳು ಇಲ್ಲದೇ ಇದ್ದುದರಿಂದ ಈ ರೀತಿಯ ಅವ್ಯವಹಾರದ ಬಗ್ಗೆ ನಿಗಾ ಇಡುವವರು ಇರಲಿಲ್ಲ.
ಇತ್ತೀಚೆಗೆ ಪೂರ್ಣಕಾಲಿಕ ಅಧಿಕಾರಿಯೊಬ್ಬರನ್ನು ನೇಮಿಸಿದ್ದರೂ ಅವರ ವರ್ಗಾವಣೆಯಾಗಿತ್ತು.
ಸಾರ್ವಜನಿಕರ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿಯಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


