ಪುತ್ತೂರು: ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಶಾಮಿಯಾನದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಮೇ 18 ರಂದು ಉರ್ಲಾಂಡಿಯಲ್ಲಿ ನಡೆದಿದೆ

ಮೃತಪಟ್ಟ ವ್ಯಕ್ತಿ ಕುಂಜುರುಪಂಜ ಸಮೀಪದ ನಿವಾಸಿ ಸುದೀಪ್ ಚೊಕ್ಕಾಡಿ ಎಂದು ತಿಳಿದು ಬಂದಿದೆ.


ಸುದೀಪ್ ಅವರು ಭಾನುವಾರ ರಾತ್ರಿ ತಮ್ಮ ಬೈಕ್ ನಲ್ಲಿ ನೇರಳಕಟ್ಟೆಯಲ್ಲಿರುವ ಸಹೋದರನ ಮನೆಯ ಕಡೆಗೆ ಪ್ರಯಾಣಿಸುತ್ತಿದ್ದು ಈ ಸಂದರ್ಭ ರಸ್ತೆಯಲ್ಲಿದ್ದ ಶಾಮಿಯಾನದ ಲಾರಿ ಕಾಣಿಸದೇ ಇದ್ದುದರಿಂದ ಸುದೀಪ್ ರವರ ಬೈಕ್ ಲಾರಿಯ ಹಿಂಬದಿಗೆ ರಭಸವಾಗಿ ಅಪ್ಪಳಿಸಿದೆ.

ಅಪಘಾತದಲ್ಲಿ ತೀವ್ರವಾಗಿ ತಲೆಗೆ ಗಂಭೀರ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
