ಕೊಪ್ಪ: ಚಲಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ತಂತಿ ಬಿದ್ದು ಯಕ್ಷಗಾನ ಕಲಾವಿದ ದಾರುಣವಾಗಿ ಮೃತಪಟ್ಟ ಘಟನೆ ಕೊಪ್ಪ ಸಮೀಪ ನಡೆದಿದೆ.
ಮೃತ ಯುವಕನನ್ನು ರಂಜಿತ್ ಬನ್ನಾಡಿ ಎಂದು ಗುರುತಿಸಲಾಗಿದೆ.

ಕೊಪ್ಪದಲ್ಲಿ ಸೂರಾಲು ಮೇಳದ ಯಕ್ಷಗಾನ ಆಯೋಜನೆ ಮಾಡಲಾಗಿತ್ತು. ಆದರೆ ಮಳೆ ಬಂದ ಕಾರಣ ಯಕ್ಷಗಾನ ಪ್ರದರ್ಶನ ರದ್ದುಗೊಳಿಸಲಾಗಿದ್ದು, ಹೀಗಾಗಿ ರಂಜಿತ್ ಬನ್ನಾಡಿ ಮತ್ತು ಸಹಸವಾರ ಸ್ತ್ರೀ ವೇಷಧಾರಿ ವಿನೋಧ ರಾಜ್ ಬೈಕ್ ನಲ್ಲಿ ಮನೆಗೆ ವಾಪಾಸ್ಸಾಗಿದ್ದಾರೆ. ಆಗುಂಬೆ ಸಮೀಪ ಬರುತ್ತಿದ್ದಂತೆ ವಿದ್ಯುತ್ ಕಂಬದ ತಂತಿ ಇವರ ಮೈ ಮೇಲೆ ಬಿದ್ದು,ಶಾಕ್ ಹೊಡೆದು ಇಬ್ಬರು ಅಸ್ವಸ್ಥಗೊಂಡಿದ್ದರು.

ತಕ್ಷಣ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ರಂಜಿತ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಗಾಯಾಳು ವಿನೋದ್ ರಾಜ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
