ಬಿ.ಸಿ.ರೋಡ್ : ಈಗೀಗ ಹಿಂದು ಸಮಾಜದ ಮೇಲೆ ನಿರಂತರ ದಾಳಿಯಾಗುತ್ತಿದೆ. ಲವ್ ಜಿಹಾದ್ ಎಂಬ ಹೆಸರಿನಲ್ಲಿ ಮಹಿಳೆಯರ ಅಪಹರಣ ಅಷ್ಟೇ ಅಲ್ಲದೇ ಗೋವುಗಳ ಅಪಹರಣ ನಡೆಯುತ್ತಿದೆ, ಇದನ್ನೆಲ್ಲಾ ಸುಹಾಸ್ ಶೆಟ್ಟಿಯಂತಹ ಯುವಕರು ತಡೆಯುತ್ತಾರೆ. ಅದಕ್ಕೆ ಅವರನ್ನು ರೌಡಿ ಶೀಟರ್ ಎಂದು ಬಿಂಬಿಸುವ ಕಾರ್ಯ ನಡೆಯುತ್ತಿದೆ.
ಘಜನಿ ಮಹಮ್ಮದ್ ಕಾಲದಿಂದಲೂ ಇದೇ ರೀತಿ ನಡೆಯುತ್ತಿದೆ. ಸುಹಾಸ್ ಶೆಟ್ಟಿ ತಂದೆ ತಾಯಿಯ ಮೇಲೆ ಅತೀವ ಪ್ರೀತಿ ಇಟ್ಟಿದ್ದಾರೆ. ಅದರೆ ಆತ ಒಮ್ಮೆ ಇಟ್ಟ ಹೆಜ್ಜೆ ಹಿಂದೆ ಇಡುವವನಲ್ಲ ಅವಮೊಬ್ಬ ವೀರ ಯುವಕ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ ಭಟ್ ತಿಳಿಸಿದರು.

ಅವರು ಸೋಮವಾರ ಮಧ್ವ ಪ್ಯಾಲೇಸ್‌ನಲ್ಲಿ ನಡೆದ ಇತ್ತೀಚೆಗೆ ದುಷ್ಕರ್ಮಿಗಳಿಂದ ಬಲಿಯಾದ ಸುಹಾಸ್ ಶೆಟ್ಟಿಯವರ ಉತ್ತರ ಕ್ರಿಯೆಯ ಸಂದರ್ಭ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಕೆಲವು ಪ್ರಮುಖರು ತಮ್ಮ ಅಧಿಕಾರಕ್ಕೋಸ್ಕರ ಮುಸ್ಲಿಂ ಬಾಂಧವರೊಂದಿಗೆ ವ್ಯವಹಾರ ಮಾಡುತ್ತಾರೆ.
ಇದೇ ಹಿಂದು ಧರ್ಮದ ಬಲಹೀನತೆ. ಆದರೆ ಇದನ್ನು ಮೀರಿ ದೇಶದ್ರೋಹಿಗಳಿಗೆ ಮತ್ತು ಧರ್ಮದ್ರೋಹಿಗಳಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭ ಸುಹಾಸ್ ಶೆಟ್ಟಿಯವರಿಗೆ ವಸಂತ ಶೆಟ್ಟಿ, ರಾಜೇಶ್ ಭಂಡಾರಿ, ಚಂದ್ರಶೇಖರ ಶೆಟ್ಟಿ ಮೂವರು ಮಾವಂದಿರಿದ್ದು, ಅವರಲ್ಲಿ ಚಂದ್ರಶೇಖರ್ ಪುಳಿಮಜಲು ಕುಟುಂಬದ ಪರವಾಗಿ ಮಾತನಾಡಿ ಬಾಲ್ಯದ ಶಿಕ್ಷಣವನ್ನು ಅವರ ತಂದೆ ಮೈಸೂರಿನಲ್ಲಿರುವ ಸಂದರ್ಭ ಪೂರೈಸಿರುವರು.

ನಂತರದ ದಿನಗಳಲ್ಲಿ ಅವರ ಉದ್ಯಮವನ್ನು ಮಂಗಳೂರಿನಲ್ಲಿ ನಡೆಸಿದಾಗ ಸಂಘಟನೆ, ಹಿಂದುತ್ವದ ಆಕರ್ಷಣೆಯಾಗಿ ಸುಹಾಸ್ ಶೆಟ್ಟಿಯವರು ಬಜರಂಗದ ಉನ್ನತ ಸ್ಥಾನವನ್ನು ಅಲಂಕರಿಸಿದರು.
ಹಿಂದುಕಾರ್ಯಕರ್ತರಿಗೆ ತೊಂದರೆಯಾದಾಗ ಸುಹಾಸ್ ಶೆಟ್ಟಿ ಬರುತ್ತಿದ್ದರು. ಮುಂದಿನ ದಿನಗಳಲ್ಲಿ ಉತ್ತಮ ನಾಯಕರಾಗಿರಬೇಕಾಗಿರುವ ಅವರು ದುಷ್ಕರ್ಮಿಗಳಿಂದ ಬಲಿಯಾಗಿದ್ದಾರೆ, ಕಷ್ಟದಲ್ಲಿರುವ ಗ್ರಾಮದ ಹಲವಾರು ಕುಟುಂಬಗಳಿಗೆ ಸಹಕಾರ ನೀಡುವ ಗುಣವೂ ಅವರದ್ದಾಗಿತ್ತು ಎಂದು ತಿಳಿಸಿದರು.
ಜಗದೀಶ್ ಕಾರಂತ, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ದಕ್ಷಿಣ ಜಿಲ್ಲಾ ಸಂಸದ ಬ್ರಜೇಶ್ ಚೌಟ, ಪೋಷ್ಟ್ ಕಾಡ್೯ ವಾಟ್ಸಪ್ ಗ್ರೂಪ್‌ನ ಸಂಸ್ಥಾಪಕ ಮಹೇಶ್ ವಿಕ್ರಮ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಚೆನ್ನಪ್ಪ ಕೋಟ್ಯಾನ್, ಉಡುಪಿ ಶಾಸಕ ಯಶ್ವಾಲ್, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬಂಟ್ವಾಳ ಶಾಸಕ ರಾಜೇಶ್ ನಾಕ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹಿಂದು ಮುಖಂಡ ಶರಣ್ ಪಂಪ್ವೆಲ್, ಪ್ರಸಾದ್ ರೈರವರು ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸಿ, ಸುಹಾಸ್ ಶೆಟ್ಟಿಯವರ ತಂದೆ ಮೋಹನ್ ಶೆಟ್ಟಿ ಮತ್ತು ತಾಯಿ ಸುಲೋಚನಾ ಶೆಟ್ಟಿ ಅವರಿಗೆ ಸಾಂತ್ವನ ನೀಡಿದರು.
ಕಲ್ಲಡ್ಕ ಡಾ| ಪ್ರಭಾಕರ ಭಟ್ ನುಡಿನಮನ ಸಲ್ಲಿಸಿದರು.
