Breaking
23 Mar 2026, Mon

ಬಜಗೋಳಿಯ ಯುವಕನಿಗೆ ಪಾಕ್ ನಂಬರ್ ನಿಂದ ಮೆಸೇಜ್

ಕಾರ್ಕಳ: ಜಮ್ಮಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಅಮಾಯಕ ಪ್ರವಾಸಿಗರ ಪ್ರಾಣವನ್ನು ಬಲಿ ಪಡೆದ ಪಾಕ್ ನ ಉಗ್ರರ ಹೆಡೆಮುರಿಯನ್ನು ಕಟ್ಟುವುದಕ್ಕೆ ಮತ್ತು ಆಪರೇಷನ್ ಸಿಂಧೂರ್ ಬಳಿಕ ಆಪರೇಷನ್ ಸಿಂಧೂರ್ ಪಾರ್ಟ್ -2 ಕಾರ್ಯಾಚರಣೆ ಯನ್ನು ಭಾರತೀಯ ಸೇನೆ ಮುಂದುವರೆಸಿದೆ.

ಇತ್ತ ಸೈಬರ್ ದಾಳಿಯನ್ನು ನಡೆಸುವುದಕ್ಕೆ ಪಾಪಿ ಪಾಕ್ ಸಂಚು ಹೂಡಿರುವ ಮಾಹಿತಿ ಗುಪ್ತಚರ ಇಲಾಖೆಗಳಿಗೆ ಲಭ್ಯವಾಗಿದ್ದು ಸರಕಾರ, ಪೊಲೀಸ್ ಇಲಾಖೆಗಳು ಈ ಕುರಿತು ಎಚ್ಚರಿಕೆಯ ಸಂದೇಶಗಳನ್ನು ಸಾರ್ವಜನಿಕರಿಗೆ ರವಾನೆ ಮಾಡಿದೆ.

ಈ ಮಧ್ಯೆ ಉಡುಪಿ ಜಿಲ್ಲೆಯ  ಕಾರ್ಕಳ ಬಜಗೋಳಿಯ ಸುಶಾಂತ್ ಎಂಬವರಿಗೆ ಹಾಯ್ “ಹೌ ಆರ್ ಯು” ಅನ್ನುವ ಎನ್ನುವ ಸಂದೇಶ ಬಂದಿದೆ.

ಇಂದು ಬೆಳಿಗ್ಗೆ 10:24ರ ವೇಳೆಗೆ 923400397042 ನಂಬರ್ ನಿಂದ ಸಂದೇಶ ಬಂದಿದೆ. ಭಾರತ್ ಮತ್ತು ಪಾಕ್ ನಡುವೆ ಯುದ್ಧದ ವಾತಾವರಣವಿರುವ ವೇಳೆ ಪಾಕ್ ಮೂಲದ ನಂಬರ್ ನಿಂದ ಈ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ  ಸುಶಾಂತ್ ಅವರು ಪಾಕಿಸ್ತಾನದಿಂದ ಇಂತಹ ಸಂದೇಶಗಳು ಬರುತ್ತಿದೆ. ನಾನು ಆ ಸಂದೇಶಕ್ಕೆ ಮರು ಉತ್ತರ ನೀಡದೇ ಬ್ಲಾಕ್ ಮಾಡಿರುತ್ತೇನೆ. ಪಾಪಿ ಪಾಕಿಸ್ತಾನದಿಂದ ಬರುವ ಸಂದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದಾರೆ.

ಈ ಕುರಿತು ಕಾರ್ಕಳ ಎಎಸ್ಪಿ ಡಾ. ಹರ್ಷ ಪ್ರಿಯಂವದ ಪ್ರತಿಕ್ರಿಯೆ ನೀಡಿದ್ದು ಸಾರ್ವಜನಿಕರು ಇಂತಹ ಸಂದೇಶಗಳ ಬಗ್ಗೆ ಜಾಗರೂಕರಾಗಿರಬೇಕು. ತಮ್ಮ ಮೊಬೈಲ್ಗೆ ಸಂದೇಶ ಬಂದಲ್ಲಿ ಅದಕ್ಕೆ ರಿಪ್ಲೈ ಮಾಡದೇ ಆ ನಂಬರ್ ಬ್ಲಾಕ್ ಮಾಡಿ ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *