Breaking
19 Sep 2026, Sat

ಎರಡು ಅಂಗಡಿಗಳು ಬೆಂಕಿಗಾಹುತಿ: ಕರಿಮೆಣಸು ಸುಟ್ಟು ಕರಕಲು

ವಿಟ್ಲ: ಎರಡು ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ವಿಟ್ಲದ ಅರಮನೆ ರಸ್ತೆಯ ರಸ್ಕಿನ್ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ಈ ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮುರುಳಿಧರ್ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ಕೂಡಲೇ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರು.ಬಳಿಕ ಸ್ಥಳಕ್ಕೆ ಆಗಮಿಸಿದ ಪುತ್ತೂರು ವಿಭಾಗದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ.

ಘಟನೆಯಲ್ಲಿ ಅಂಗಡಿಗಳಲ್ಲಿ ಇದ್ದ ಅಡಿಕೆ ಕರಿಮೆಣಸು ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *