ಬಂಟ್ವಾಳ: ಪುಂಜಾಲಕಟ್ಟೆ ಸೌಹಾರ್ಧ ಫ್ರೆಂಡ್ಸ್ ವತಿಯಿಂದ ದ.ಕ.ಜಿಲ್ಲಾ ಕಬಡ್ಡಿ ಎಸೋಸಿಯೇಶನ್ ಸಹಕಾರದಲ್ಲಿ ಸಾಮಾಜಿಕ ಸೇವಾಕರ್ತ ದಿ.ಸಿಲ್ವೆಸ್ಟರ್ ಪಿಂಟೋ ನಯನಾಡು ಅವರ ಸ್ಮರಣಾರ್ಥ 55 ಕೆ.ಜಿ. ಮತ್ತು ಗ್ರಾಮ ಸೀಮಿತ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎ.17ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅದ್ಯಕ್ಷ ಸುಧಾಕರ ಶೆಣೈ ಖಂಡಿಗ ತಿಳಿಸಿದರು .
ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು .ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪಂದ್ಯಾಟ ಉದ್ಘಾಟಿಸಲಿರುವರು.50 ರಿಂದ 60 ತಂಡಗಳು ನೊಂದಾವಣೆ ಮಾಡಿದೆ. ಜೊತೆಗೆ ಗ್ರಾಮ ಸೀಮಿತ ಸ್ಥಳೀಯ ತಂಡಗಳಿಗೆ ಮುಕ್ತ ಪಂದ್ಯಾಟವನ್ನು ಏರ್ಪಡಿಸಲಾಗಿದೆ. ಈ ಕಬಡ್ಡಿ ಪಂದ್ಯಾಟ ವೀಕ್ಷಿಸಲು ಪ್ರತ್ಯೇಕವಾದ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿದೆ, ಅಲ್ಲದೆ ರಾತ್ರಿ ಮನೆಗೆ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಪ್ರಮುಖರಾದ ಮಹಮ್ಮದ್ ನಂದಾವರ, ಇಲ್ಯಾಸ್ ಬಸವನಗುಡಿ, ನೆಲ್ವಿಸ್ಟರ್ ಗ್ಲ್ಯಾನ್ ಪಿಂಟೋ ಉಪಸ್ಥಿತರಿದ್ದರು.









