Breaking
19 Sep 2026, Sat

ಉಡುಪಿ: ವೇಗದ ಗಾಳಿಗೆ ಮನೆ ಮೇಲೆ ಬಿದ್ದ ಬೃಹತ್ ಆಲದ ಮರ: ದಂಪತಿ ಗಂಭೀರ

ಉಡುಪಿ: ಸೋಮವಾರ ಸಂಜೆ ಬೀಸಿದ ವೇಗದ ಗಾಳಿಗೆ ಬೃಹತ್ತಾದ ಆಲದಮರವೊಂದು, ಮನೆಯ ಮೇಲೆ ಉರುಳಿಬಿದ್ದ ಘಟನೆ ಉಡುಪಿ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗ, ಡಾ. ವಿ.ಎಸ್.ಆಚಾರ್ಯ ಮನೆಯ ಬಳಿ ನಡೆದಿದೆ.

ಮನೆಯೊಳಗೆ ಸಿಲುಕಿ ಕೊಂಡಿರುವ ದಂಪತಿಗಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸ್ಥಳೀಯರ ಸಹಕಾರದಿಂದ ಹೊರ ತೆಗೆದಿದ್ದಾರೆ. ಇರ್ವರಿಗೂ ಗಂಭೀರ ಸ್ವರೂಪದ ಗಾಯಗಳಾರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.

60 ವರ್ಷದ ಬಾಣಸಿಗ ರಾಘವೇಂದ್ರ ಭಟ್, 49 ವರ್ಷದ ಪತ್ನಿ ನೀರಜಾ ಭಟ್ ಗಾಯಾಳುಗಳಾಗಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು, ಮರ ಕಡಿದು ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದಾರೆ.

Leave a Reply

Your email address will not be published. Required fields are marked *