Breaking
23 Mar 2026, Mon

ಬಂಟ್ವಾಳ : ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ ಯುವಕ ಅಕಾಲಿಕ ಸಾ*ವು

ಬಂಟ್ವಾಳ : ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದ ರಜತ್ (25) ಎಂಬವರು ಏ.05 ರಂದು ಅಕಾಲಿಕವಾಗಿ ಮರಣ ಹೊಂದಿದ್ದು, ಇವತ್ತುಮೃತದೇಹವನ್ನು ಬಂಟ್ವಾಳ ತಾಲೂಕಿನ ಸ್ವಗ್ರಾಮಕ್ಕೆ ತರಲಾಗಿದೆ.
ನರಿಕೊಂಬು ಗ್ರಾಮದ ರವಿ ಸಫಲ್ಯರ ಮಗ ಮೃತ ರಜತ್ ದಕ್ಷಿಣ ಆಫ್ರಿಕಾದಲ್ಲಿ ಉದ್ಯೋಗದಲ್ಲಿದ್ದರು. ಮೃತರ ಶರೀರವನ್ನು ಊರಿಗೆ ತರಲು ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದ ಬ್ರಿಜೇಶ್ ಚೌಟ, ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್, ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪುರುಷೋತ್ತಮ ಸಾಲಿಯಾನ್ , ದಿನೇಶ್ ಅಮ್ಟೂರ್, ಉದಯ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಅಂತರ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರುಗಳು ನಿರಂತರ ಸಂಪರ್ಕ ಮಾಡಿ ಸಹಕರಿಸಿದ್ದರು.


ಇವತ್ತು ನರಿಕೊಂಬು ಗ್ರಾಮದ ನಾಯಿಲ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಮೃತರು ತಂದೆ, ತಾಯಿ, ಹಾಗೂ ಅಪಾರ ಬಂಧು ಮಿತ್ರಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *