ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಹಂಪಿ ಗ್ರಾಮೀಣ ಪ್ರದೇಶದ ಜನರ ವಿವಿಧ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಿದ್ದನ್ನು ಸ್ಮರಿಸಿ, ಅಲ್ಲಿನ ಕಲಾವಿದರ ನಿಯೋಗವೊಂದು ಶುಕ್ರವಾರ ಬಂಟ್ವಾಳದ ಕಳ್ಳಿಗೆ ಮನೆಯಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿತು.

ಹಂಪಿಯ ಚಿತ್ರಕಲಾವಿದ ಆನಂದ್ ಹಿರೇಮಠ್ ನೇತೃತ್ವದ ಕಲಾವಿದರ ನಿಯೋಗವು ಬಿ.ರಮಾನಾಥ ರೈ ಅವರನ್ನು ಭೇಟಿಯಾಗಿ ಗೌರವಿಸಿತು. ಈ ಸಂದರ್ಭದಲ್ಲಿ ಕಲಾವಿದ ಆನಂದ್ ಹಿರೇಮಠ್ ಅವರು ಸ್ವತಃ ರಚಿಸಿದ ರಮಾನಾಥ ರೈ ಅವರ ತೈಲವರ್ಣದ ಭಾವಚಿತ್ರವನ್ನು ‘ಬಡವರ ಮಾಣಿಕ್ಯ’ ಎಂಬ ಹೆಸರಿನೊಂದಿಗೆ ಹಸ್ತಾಂತರಿಸಿದರು. ಈ ಗೌರವವು ಗಮನ ಸೆಳೆಯಿತು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಉಮೇಶ್ ನೆಲ್ಲಿಗುಡ್ಡೆ, ಶೈಲೇಶ್ ಪೂಜಾರಿ, ಸಂದೇಶ್ ಶೆಟ್ಟಿ, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.




