ಸಿದ್ದಕಟ್ಟೆ ಮೊಸರು ಕುಡಿಕೆ ಉತ್ಸವದ ಮಾಜಿ ಅಧ್ಯಕ್ಷ, ಸಿದ್ದಕಟ್ಟೆ ಬಿಜೆಪಿಯ ಹಿರಿಯ ಕಾರ್ಯಕರ್ತ ಉಮೇಶ್ ಗೌಡ ಮೊಯಿಲ್ಬೆಟ್ಟು ವಿಧಿವಶ

ಸಿದ್ದಕಟ್ಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ, ಸಿದ್ಧಕಟ್ಟೆ ಮೊಸರು ಕುಡಿಕೆ ಉತ್ಸವದ ಮಾಜಿ ಅಧ್ಯಕ್ಷ, ಸಿದ್ದಕಟ್ಟೆ ಬಿಜೆಪಿಯ ಹಿರಿಯ ಮುಖಂಡ ಉಮೇಶ್ ಗೌಡ ಮೊಯಿಲ್ಬೆಟ್ಟು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧಾನರಾದರು.

ಸಿದ್ದಕಟ್ಟೆ ಪೇಟೆಯಲ್ಲಿ ಶಾಂಭವಿ ಗ್ಲಾಸ್ ವರ್ಕ್ಸ್ ಉದ್ಯಮ ನಡೆಸುತಿದ್ದ ಶ್ರೀಯುತರು ಸದಾ ಕಾಲ ನಗುಮೊಗದಿಂದಿದ್ದು, ಸದಾಕಾಲ ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು.

ಸಿದ್ದಕಟ್ಟೆ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.ಸಿದ್ದಕಟ್ಟೆ ಗಣೇಶೋತ್ಸವ ಸಮಿತಿಯಲ್ಲಿ ಯು ಸಕ್ರಿಯರಾಗಿದ್ದರು.ಕೊರ್ಯಾರು ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ, 12 ವರ್ಷಗಳ ಹಿಂದೆ ನಡೆದಿದ್ದ ದೇವಸ್ಥಾನದ ಬ್ರಹ್ಮಕಲಾಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿಯು ಜವಾಬ್ದಾರಿ ನಿರ್ವಹಿಸಿದ್ದರು.

ದೇವಸ್ಥಾನದ ಭಜನಾ ಮಂಡಳಿಯಲ್ಲೂ ಸಕ್ರಿಯರಾಗಿದ್ದರು. ದೇವಸ್ಥಾನದ ಎಲ್ಲಾ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು.

Leave a Reply

Your email address will not be published. Required fields are marked *