ಬೆಂಗಳೂರು: ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು. ಇದರ ಸಹಾಯಾರ್ಥವಾಗಿ ರಾಷ್ಟ್ರಮಟ್ಟದ ಕರೋಕೆ ಗಾಯನ ಹಾಗೂ ಕರುನಾಡ ಸೇನಾನಿಗಳ ವೇದಿಕೆಯ ಅಂಗಸಂಸ್ಥೆಯಾದ ಒಂದು ಹೆಜ್ಜೆ ರಕ್ತದಾನಿ ಬಳಗ ಮೈಸೂರು ಇದರ ಅಂಗ ಸಂಸ್ಥೆ ಒಂದು ಹೆಜ್ಜೆ ರಕ್ತದಾನಿ ಬಳಗ ಉಡುಪಿ ಜಿಲ್ಲೆಯ ಪೋಸ್ಟರ್ ಅನ್ನು ಕಾಪು ವಿಧಾನಸಭಾ ಕ್ಷೇತ್ರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆಯನ್ನು ಮಾಡಿದ ಜೋಸೆಫ್ ಲೊಬೋ ಶಂಕರ್ ಪುರ, ನಟ ಹಾಗೂ ನಿರ್ದೇಶಕರಾದ ಸೋಮನಾಥ ಶೆಟ್ಟಿ,ಸಂಗೀತ ಕ್ಷೇತ್ರದಲ್ಲಿ ಮಿಂಚಿದ ಬಾಲ ಪ್ರತಿಭೆ ಆಯುಷ್ ಮೆನೇಜಸ್, ರಿಸೆಲ್ ಮೆಲ್ಬಾ ಕ್ರಸ್ಥಾ ಇವರನ್ನು ಶಾಸಕರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.




ಬಳಿಕ ರಾಷ್ಟ್ರಮಟ್ಟದ ಕರೋಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಕ್ತದಾನದ ಬಗ್ಗೆ “ಒಂದು ಹೆಜ್ಜೆ ರಕ್ತದಾನಿ” ಬಳಗ ಮೈಸೂರು ಇದರ ಸ್ಥಾಪಕ ಅಧ್ಯಕ್ಷರಾಗಿರುವ ರಕ್ತದಾನಿ ಮಂಜು ಮಾತನಾಡಿ ಸತತ ನಾಲ್ಕು ವರ್ಷದಿಂದ ಒಂದು ಹೆಜ್ಜೆ ರಕ್ತದಾನ ಬಳಗವನ್ನು ಮೈಸೂರು- ಬೆಂಗಳೂರಿನಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡಿಸುತ ನಾವು ಕೂಡ ಮಾಡುತ್ತಾ ಬಂದಿರುತ್ತೇವೆ ಇತ್ತೀಚಿನ ದಿನಗಳಲ್ಲಿ ರಕ್ತದಾನ ಮಾಡುವುದು ಕಡಿಮೆಯಾಗಿದೆ ಹಾಗಾಗಿ ಪ್ರತಿಯೊಬ್ಬ ಯುವಕ ಯುವತಿಯರು ಕೂಡ ಸೇರಿ ರಕ್ತದಾನ ಮಾಡಬೇಕು ಎಂದರು.ಮುಂದುವರಿಯುತ್ತ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ನೀಮಾ ಲೋಬೊ ಅವರನ್ನು ಒಂದೇ ರಕ್ತದಾನ ಬಳಗ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಕ್ತದಾನ ಮಾಡುವ ಮುಖಾಂತರ ಜವಾಬ್ದಾರಿಯನ್ನು ಕೊಡುತ್ತಿದ್ದೇವೆ ಅವರ ಜೊತೆ ಉಡುಪಿ ಜಿಲ್ಲೆಯ ಎಲ್ಲಾ ಯುವಕ ಯುವತಿಯರು ವಿದ್ಯಾರ್ಥಿಗಳು ಸೇರಿ ಮತದಾನ ಮಾಡುವ ಮೂಲಕ ಸೇವೆಯನ್ನು ಮಾಡಬೇಕೆಂದು ಈ ಮೂಲಕ ತಿಳಿಸುತ್ತಿದ್ದೇವೆ ಎಂದು ಮಾತನಾಡಿ ರಕ್ತದಾನದ ಬಗ್ಗೆ ಅರಿವನ್ನು ಮೂಡಿಸಿದರು.



ಬಳಿಕ ಉಡುಪಿ ಜಿಲ್ಲೆಯ ರಕ್ತದಾನಿ ಬಳಗದ ನೀಮ ಲೋಬೋ ಇವರು ಏಳು ಬಾರಿ ರಕ್ತದಾನ ಮಾಡಿರುವುದಕ್ಕೆ ಕರುನಾಡ ರಕ್ತ ಸೇನಾನಿ ಪ್ರಮಾಣ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗ ಉಡುಪಿ ಜಿಲ್ಲಾ ಅಧ್ಯಕ್ಷರಾಗಿರುವ ಪ್ರಸಾದ್ ರೈ, ನಟ ಹಾಗೂ ನಿರ್ದೇಶಕರಾಗಿರುವ ಶ್ರೀ ನಂದನ್ ಬೆಂಗಳೂರು, ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ಸಂಸ್ಥಾಪಕರಾಗಿರುವ ಆನಂದ್ ಕಲ್ಪತರು, ಉಡುಪಿ ಕರೋಕೆ ಮ್ಯೂಸಿಕಲ್ ಕ್ಲಬ್ ನ ಸಂಸ್ಥಾಪಕರಾಗಿರುವ ಮದನ್ ಮಣಿಪಾಲ್.,ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಸಂಸ್ಥಾಪಕರಾಗಿರುವ ಪ್ರಕಾಶ್ ಕಾಮತ್, ರಾಷ್ಟ್ರ ಹಾಗೂ ರಾಜ್ಯಮಟ್ಟದ ಗಾಯಕರಾಗಿರುವ ವಿಲ್ಫೆಡ್ ವಿಜಯ ಡೇಸ ಶಂಕರಪುರ, ಖ್ಯಾತ ಪತ್ರಕರ್ತ ಹಾಗೂ ಕಲಾವಿದರಾಗಿರುವ ಪ್ರಕಾಶ್ ಸುವರ್ಣ ಕಟ್ಪಾಡಿ, ಖ್ಯಾತ ಕಲಾವಿದರಾಗಿರುವ ನಾಗೇಶ್ ಕಾಮತ್ ಕಟ್ಪಾಡಿ ಹಾಜರಿದ್ದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಂಗೀತಗಾರರಿಗೆ ಸ್ಮರನಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು




