ಕುಂದಾಪುರ: ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ವೊಂದು ನೀರಿನ ಸುಳಿಗೆ ಸಿಲುಕಿ ಮುಳುಗಡೆಯಾದ ಘಟನೆ ಗಂಗೊಳ್ಳಿಯ ಅಳಿವೆ ಬಾಗಿಲಿನಲ್ಲಿ ಬುಧವಾರ(ಸ.2) ನಡೆದಿದೆ.

ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ತಕ್ಷಣವೇ ರಕ್ಷಿಸಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುಳುಗಡೆಯಾದ ಬೋಟ್‌ನ್ನು ಬಳಿಕ ಯಶಸ್ವಿಯಾಗಿ ದಡಕ್ಕೆ ತರಲಾಗಿದೆ.

ಕಳೆದ ವಾರವಷ್ಟೇ ಇದೇ ಗಂಗೊಳ್ಳಿ ಅಳಿವೆ ಬಾಗಿಲಿನಲ್ಲಿ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ಬೋಟ್‌ವೊಂದು ಸಂಪೂರ್ಣ ಮುಳುಗಡೆಯಾಗಿತ್ತು. ಆ ಸಂದರ್ಭದಲ್ಲಿ ಬೋಟ್‌ನಲ್ಲಿದ್ದ*27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು.

ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಬೋಟ್ ಅಪಾಯಕ್ಕೆ ಸಿಲುಕಿರುವುದು ಸ್ಥಳೀಯ ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.


