Breaking
29 Aug 2026, Sat

ಕಣಿಯೂರು: ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಶಿವಶಂಕರ್ ನಾಯಕ್ ಭೇಟಿ; ಪ್ರತಿ ತಿಂಗಳು ಅಕ್ಕಿ ನೀಡುವ ಭರವಸೆ

ಕಣಿಯೂರು: ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರಕ್ಕೆ ಮಾರುತಿಪುರ ರೈತಬಂಧು ಆಹಾರೋದ್ಯಮದ ಮಾಲಕರಾದ ಶಿವಶಂಕರ್ ನಾಯಕ್ ಭೇಟಿ ನೀಡಿ, ಪಾಲನಾ ಕೇಂದ್ರದಲ್ಲಿರುವ ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಪ್ರತಿ ತಿಂಗಳು ಅಕ್ಕಿ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರದಲ್ಲಿನ ಸಂತ್ರಸ್ತರ ಕುಂದುಕೊರತೆಗಳನ್ನು ಪರಿಶೀಲಿಸಿದ ಅವರು, ಅವರೊಂದಿಗೆ ಮಾತುಕತೆ ನಡೆಸಿ ಶುಭ ಹಾರೈಸಿದರು.

ಈ ಸಂದರ್ಭ ಪ್ರಮುಖರಾದ ಪ್ರಪುಲ್ಲಚಂದ್ರ, ಎಸ್‌ಕೆಡಿಆರ್‌ಡಿಪಿಯ ಕಣಿಯೂರು ವಲಯಾಧ್ಯಕ್ಷ ರಮಾನಂದ ಪೂಜಾರಿ ಮುಗೆರೋಡಿ, ಮೇಲ್ವಿಚಾರಕಿ ಚಂದ್ರಿಕಾ, ಫಿಸಿಯೋಥೆರಪಿಸ್ಟ್ ರಶ್ಮಿತಾ, ಕೌಶಲ್ಯ ತರಬೇತಿ ಅಧ್ಯಾಪಕಿ ವಿನಯ, ಸಿಬ್ಬಂದಿಗಳಾದ ಶಾಲಿನಿ, ಪ್ರಮೀಳಾ, ಉಷಾ, ಶಿಕ್ಷಕಿ ಸುಜಾತ, ರಶ್ಮಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *