Breaking
16 Oct 2026, Fri

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ, ಪೊಲೀಸ್ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ರಕ್ಷಾಬಂಧನ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೆಳ್ತಂಗಡಿ ವತಿಯಿಂದ ರಕ್ಷಾಬಂಧನದ ಅಂಗವಾಗಿ ಶಾಸಕ ಹರೀಶ್ ಪೂಂಜಾ, ಕುವೆಟ್ಟು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಪುಂಜಾಲಕಟ್ಟೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ, ಮಾಲಾಡಿ ಹಾಗೂ ಮಡಂತ್ಯಾರ್ ಗ್ರಾಮ ಪಂಚಾಯತ್‌ಗಳ ಸ್ವಚ್ಛತಾ ಸಿಬ್ಬಂದಿಗೆ ರಕ್ಷಾಬಂಧನ ಕಟ್ಟಿ ಸಿಹಿ ಹಂಚಿ ಶುಭಾಶಯ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ತುಳಸಿ ಉಮೇಶ್, ಪೂರ್ಣಿಮಾ ಜಯಂತ್, ಉಪಾಧ್ಯಕ್ಷೆ ಶಾರದಾ ಚಾರ್ಮಾಡಿ, ಕಾರ್ಯದರ್ಶಿ ಶಶಿಕಲಾ ದೇವಪ್ಪ ಗೌಡ, ಕೋಶಾಧಿಕಾರಿ ಸಂಗೀತ ಶೆಟ್ಟಿ, ಮಂಜುಳ ನಡ, ಸವಿತಾ ಕುಲಾಲ್, ಮಂಜುಳ ಅತ್ತಾಜೆ, ಜಿಲ್ಲಾ ಎಸ್‌ಸಿ ಮೋರ್ಚಾ ಸದಸ್ಯೆ ಚಂದ್ರಕಲಾ, ಸದಸ್ಯೆ ಜಯಂತಿ, ಮಡಂತ್ಯಾರ್ ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭ ಹಾಗೂ ಕುಕ್ಕಳ ಬೂತ್ ಕಾರ್ಯದರ್ಶಿ ರಾಜೇಶ್ವರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *