ಕಲ್ಲಡ್ಕ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ವೀರಕಂಭ ವತಿಯಿಂದ ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಹಾಗೂ ಶ್ರೀ ಶಾರದಾ ಭಜನಾ ಮಂದಿರ ವೀರಕಂಭ ಇದರ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಆಗಸ್ಟ್ 21ನೇ ಶುಕ್ರವಾರ ವೀರಕಂಭ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಜರಗಿತು.

ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಶಿಶು ಮಂದಿರದ ಮುಖ್ಯ ಶಿಕ್ಷಕಿ ಶಾಂತ ಲಕ್ಷ್ಮಿ ವರಮಹಾಲಕ್ಷ್ಮಿ ಪೂಜಾ ಮಹೋತ್ಸವ ಹಾಗೂ ರಕ್ಷಾಬಂಧನದ ಮಹತ್ವದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು. ಪೂಜಾ ಸಮಿತಿಯ ಅಧ್ಯಕ್ಷ ಸೌಮ್ಯ ವೇಣುಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾಕ್ಟರ್ ಪ್ರಭಾಕರ್ ಭಟ್ ಹಾಗೂ ಕಮಲ ಪ್ರಭಾಕರ್ ಭಟ್ ಉಪಸ್ಥಿತರಿದ್ದರು.

ಶಾಂಭವಿ ಆಚಾರ್ಯ, ಕೋಮಲಾಕ್ಷಿ, ವೇದಾವತಿ ಪ್ರಾರ್ಥಿಸಿ, ಪೂಜಾ ಸ್ವಾಗತಿಸಿ,ಕುಸುಮ ಶೆಟ್ಟಿ ವಂದಿಸಿದರು. ಪ್ರೇಮ ನಾಗೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.



