Breaking
21 Mar 2026, Sat

ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಪೂಂಜ ಇದರ 45ನೇ ವರ್ಷದ “ಭಜನಾ ಮಂಗಲೋತ್ಸವ” ಹಾಗೂ ಶ್ರೀ ದುರ್ಗಾ ನಮಸ್ಕಾರ ಪೂಜೆ

ಪೂಂಜ: ಶ್ರೀ ಪಂಚದುರ್ಗಾಪರಮೇಶ್ವರಿ ಕ್ಷೇತ್ರ ಪೂಂಜ, ಇಲ್ಲಿಯ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಇದರ 45ನೇ ವರ್ಷದ ಭಜನಾ ಮಂಗಲೋತ್ಸವ, ಶ್ರೀ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ಜರುಗಿತು.

ದಿನಾಂಕ 13/1/25ರ ಸೋಮವಾರ ಸಂಜೆ 5:30ರಿಂದ ಪ್ರಾರಂಭವಾದ ದುರ್ಗಾ ನಮಸ್ಕಾರ ಪೂಜೆಯು ರಾತ್ರಿ ಅನ್ನಸಂತರ್ಪನೆಯೊಂದಿಗೆ ಪೂರ್ಣಗೊಂಡಿತು.ನಂತರ ದಿನಾಂಕ 14/1/25ನೇ ಮಂಗಳವಾರ ಬೆಳಿಗ್ಗೆ ಸೂರ್ಯೋದಯದಿಂದ ಪ್ರಾರಂಭಗೊಂಡ ಭಜನೆಯು 15/1/25 ನೇ ಬುಧವಾರ ಸೂರ್ಯೋದಯಕ್ಕೆ ಮುಕ್ತಾಯಗೊಂಡಿತು.

ಈ ಭಜನಾ ಮಂಗಲೋತ್ಸವದಲ್ಲಿ ಇಪ್ಪತ್ತಕ್ಕೂ ಅಧಿಕ ತಂಡಗಳು ಭಾಗಿಯಾಗಿದ್ದವು.ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *