Breaking
8 Jul 2026, Wed

ಕ್ಷುಲ್ಲಕ ಜಗಳಕ್ಕೆ ನವವಿವಾಹಿತೆಯ ಬಲಿ: ಹೆಲ್ಮೆಟ್ನಿಂದ ಹೊಡೆದು ಪತ್ನಿಯನ್ನು ಕೊಂದ ಪತಿ

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಜಗಳ ನವವಿವಾಹಿತೆಯ ಸಾವಿನಲ್ಲಿ ಅಂತ್ಯಗೊಂಡಿರುವ ಹೃದಯವಿದ್ರಾವಕ ಘಟನೆ ಬುಧವಾರ (ಜು. 8) ಬೆಳಗ್ಗೆ ಹುಬ್ಬಳ್ಳಿಯ ತಾರಿಹಾಳದ ಗಣೇಶ ನಗರದಲ್ಲಿ ನಡೆದಿದೆ.

ಮೃತರನ್ನು ನಾಗರತ್ನಾ ಹಳೆಮನಿ (19) ಎಂದು ಗುರುತಿಸಲಾಗಿದ್ದು, ಪತಿ ಶಿವರಾಜ ಹೆಲ್ಮೆಟ್ನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.


ಫೆಬ್ರವರಿಯಲ್ಲಷ್ಟೇ ವಿವಾಹವಾಗಿದ್ದ ದಂಪತಿ ನಡುವೆ ಬುಧವಾರ ಬೆಳಗ್ಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಶಿವರಾಜ, ಹೆಲ್ಮೆಟ್ನಿಂದ ನಾಗರತ್ನಾ ಅವರ ತಲೆಗೆ ಮನಬಂದಂತೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ನಾಗರತ್ನಾ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.


ನಾಗರತ್ನಾ ಅವರು ನವಲಗುಂದ ತಾಲೂಕಿನ ಇಬ್ರಾಹಿಂಪುರ ಗ್ರಾಮದ ನಿವಾಸಿಯಾಗಿದ್ದರು. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *