Breaking
8 Jul 2026, Wed

ಬೆಳ್ತಂಗಡಿ ಜನತೆಯ ಪ್ರತಿ ಮನೆಯ ಮನ ಮುಟ್ಟಿದ ಶಾಸಕ ಹರೀಶ್ ಪೂಂಜಾ ರವರಿಗೆ ಇಂದಬೆಟ್ಟು ಕಾರ್ಯಕರ್ತರಿಂದ ಗೌರವ ಅರ್ಪಣೆ

ಬೆಳ್ತಂಗಡಿ: ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಅವರ ಸ್ವಗೃಹ ಮಿಥಿಲಾದಲ್ಲಿ ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗೌರವ ಸಮರ್ಪಿಸಲಾಯಿತು.

ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಎಸ್. ಇಂದಬೆಟ್ಟು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ಹರೀಶ್ ಪೂಂಜಾ ಅವರನ್ನು ಅಭಿನಂದಿಸಿ, ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕರ್ತರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜಾ ಅವರು ನಿರಂತರವಾಗಿ ಶ್ರಮಿಸುತ್ತಿದ್ದು, ಕ್ಷೇತ್ರದ ಪ್ರತಿಯೊಂದು ಗ್ರಾಮದ ಜನರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿದ್ದಾರೆ. ಅವರ ಜನಪರ ಸೇವೆಯನ್ನು ಗುರುತಿಸಿ ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಲಭಿಸಿರುವುದು ಇಡೀ ಬೆಳ್ತಂಗಡಿ ತಾಲೂಕಿನ ಜನತೆಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಮಾಜಿ ಪಂಚಾಯತ್ ಅಧ್ಯಕ್ಷ ಆನಂದ ಅಡಿಲು, ಸದಸ್ಯರಾದ ಪ್ರಮೋದ್ ಕುಮಾರ್, ಸತೀಶ್ ಬೆದ್ರಬೆಟ್ಟು, ಬೂತ್ ಅಧ್ಯಕ್ಷರಾದ ಶಶಿಧರ ಗೌಡ ಪಡೆಂಕ್ಕಲ್, ಸಂಜೀವ ಗೌಡ ದರ್ಖಾಸು, ನಿತೇಶ್ ಕಡಿತ್ಯಾರು, ನವೀನ್ ಜೈನ್, ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ಪ್ರತೀಶ್ ಕಡಿತ್ಯಾರು, ತಾಲೂಕು ಯುವ ಮೋರ್ಚಾ ಸದಸ್ಯ ಸಂತೋಷ್ ಉಂಬೇಜೆ, ರೈತ ಮೋರ್ಚಾ ಉಪಾಧ್ಯಕ್ಷ ಪಳನಿ ಸ್ವಾಮಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಕಾಂಜಾನು, ಆದಿಚುಂಚನಗಿರಿ ಶ್ರೀಮಠದ ಅರ್ಚಕ ಶ್ರೀನಾಥ್ ಸೋಮಯ್ಯದಡ್ಡು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *