Breaking
7 Jul 2026, Tue

ಬೆಳ್ತಂಗಡಿ: ಜುಲೈ 8ರಿಂದ ಗಡಾಯಿಕಲ್ಲು ಚಾರಣಕ್ಕೆ ಮತ್ತೆ ತಾತ್ಕಾಲಿಕ ನಿಷೇಧ

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಪ್ರವಾಸಿ ತಾಣ ಗಡಾಯಿಕಲ್ಲು ಚಾರಣಕ್ಕೆ ಜುಲೈ 8ರಿಂದ ಮತ್ತೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ನಿರಂತರ ಮಳೆಯಿಂದ ಚಾರಣ ಮಾರ್ಗಗಳು ಜಾರುವಂತಾಗಿದ್ದು, ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಈ ನಿರ್ಧಾರ ಕೈಗೊಂಡಿದೆ.

ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಹಾಗೂ ಚಾರಣ ಮಾರ್ಗಗಳ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡ ನಂತರ ಚಾರಣಕ್ಕೆ ಮತ್ತೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಜೂನ್ 1ರಂದು ಚಾರಣ ಆರಂಭವಾಗಿತ್ತು. ಬಳಿಕ ಮಳೆಯ ಕಾರಣ ನಿರ್ಬಂಧ ವಿಧಿಸಲಾಗಿತ್ತು. ಜೂನ್ 25ರಂದು ಮತ್ತೆ ಚಾರಣಕ್ಕೆ ಅನುಮತಿ ನೀಡಲಾಗಿದ್ದರೂ, ಇದೀಗ ಭಾರೀ ಮಳೆಯ ಹಿನ್ನೆಲೆಯಲ್ಲಿ ಜುಲೈ 8ರಿಂದ ಮತ್ತೊಮ್ಮೆ ಚಾರಣ ಸ್ಥಗಿತಗೊಳಿಸಲಾಗಿದೆ.

Leave a Reply

Your email address will not be published. Required fields are marked *