Breaking
22 Aug 2026, Sat

ಬಜಪೆ: ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ

ಬಂಟ್ವಾಳ: ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳದ ವತಿಯಿಂದ ಬಜಪೆಯ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ರುದ್ರ, ನಮಕ, ಚಮಕ, ರುದ್ರ ಸೂಕ್ತ, ಭಾಗ್ಯ ಸೂಕ್ತ, ನಾರಾಯಣ ಸೂಕ್ತ, ಪವಮಾನ ಸೂಕ್ತ, ದುರ್ಗಾ ಸೂಕ್ತ, ಸೌರ ಸೂಕ್ತ, ಆಘಮರ್ಷಣ ಸೂಕ್ತ ಹಾಗೂ ಮಂತ್ರ ಪುಷ್ಪಗಳ ಸಾಮೂಹಿಕ ಪಠಣ ನೆರವೇರಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಎ. ರವಿಶಂಕರ ಮಯ್ಯ, ದೇವಸ್ಥಾನದ ಅರ್ಚಕ ವೆಂಕಟ್ರಮಣ ಭಟ್, ಶಾಂತರಾಮ ರಾವ್ ಎಸ್.ಬಿ., ರವಿಶಂಕರ ಕಾರಂತ್, ಶ್ರೀನಿವಾಸ ಹೊಳ್ಳ ಮಕ್ಕಾರು, ಸೀತಾರಾಮ ಮಯ್ಯ, ಕೆ. ಮಿಥುನ್ ರಾವ್, ರಾಮಚಂದ್ರ ಮಯ್ಯ ಎನ್., ಎಂ. ಜಯರಾಮ ಮಯ್ಯ, ಚಂದ್ರಮೋಹನ ರಾವ್, ಅರ್ಬಿ ಕೃಷ್ಣಕುಮಾರ ಸೋಮಯಾಜಿ, ದನೇಶ್ವರ ರಾವ್ ಅಂತರ, ಹರೀಶ್ ಭಟ್ ಹಾಗೂ ದೇವಸ್ಥಾನದ ಪ್ರಬಂಧಕಿ ಶ್ರಾವ್ಯ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *