Breaking
16 Jun 2026, Tue

ಶಾಸಕರ ಮುತುವರ್ಜಿಯಲ್ಲಿ ಕುಪ್ಪೆಟ್ಟಿ–ಉಪ್ಪಿನಂಗಡಿ ರಸ್ತೆ ದುರಸ್ಥಿ

ಬೆಳ್ತಂಗಡಿ: ನಿರಂತರ ಮಳೆಯಿಂದ ಹಾನಿಗೊಳಗಾಗಿದ್ದ ಕುಪ್ಪೆಟ್ಟಿ–ಉಪ್ಪಿನಂಗಡಿ ಪಿಡಬ್ಲ್ಯುಡಿ ರಸ್ತೆಯ ದುಸ್ಥಿತಿಯನ್ನು ಸಾರ್ವಜನಿಕರ ದೂರಿನ ಮೇರೆಗೆ ಪರಿಶೀಲಿಸಿದ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಲ್ಲಿ ಇಲಂತಿಲ ಗ್ರಾಮದ ಪಿದಮಲೆ ಪ್ರದೇಶದಲ್ಲಿ ತುರ್ತು ದುರಸ್ಥಿ ಕಾರ್ಯ ಕೈಗೊಳ್ಳಲಾಯಿತು.

ಮಳೆಯ ಪರಿಣಾಮ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ತಕ್ಷಣ ಕ್ರಮವಹಿಸಿ ರಸ್ತೆ ದುರಸ್ಥಿಗೆ ಚಾಲನೆ ನೀಡಲಾಯಿತು. ತಾತ್ಕಾಲಿಕ ಪರಿಹಾರ ಕ್ರಮವಾಗಿ ವೆಟ್ ಮಿಕ್ಸ್ ಹಾಕಿ ರಸ್ತೆ ಸಮತಟ್ಟುಗೊಳಿಸುವ ಕಾರ್ಯ ನಡೆಸಲಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ಸಂಚಾರ ಸುಗಮವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *