Breaking
14 Jun 2026, Sun

ಯುವವಾಹಿನಿ (ರಿ.) ಮಾಣಿ ಘಟಕದಿಂದ ಎರಡನೇ ಹಂತದ ಯುವ ವೃಕ್ಷೋತ್ಸವ ಕಾರ್ಯಕ್ರಮ

ಕಲ್ಲಡ್ಕ : ಯುವವಾಹಿನಿ (ರಿ.) ಮಾಣಿ ಘಟಕದಿಂದ ಎರಡನೇ ಹಂತದ ಯುವ ವೃಕ್ಷೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ ಮೂಲಕ ಮರದ ನೆರಳು ಬದುಕಿಗೆ ನೆರಳುಎಂಬ ಧ್ಯೇಯ ಉದ್ದೇಶದಿಂದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದ ಅಂಗವಾಗಿ ಜೂನ್ 13 ಶನಿವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕೆದಿಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬರಿಮಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಹಾಗೂ ಅಂಗನವಾಡಿ ಕೇಂದ್ರ ಪೆರಾಜೆಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.


ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.


ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷರಾದ ಸುಜಿತ್ ಅಂಚನ್, ಕೋಶಾಧಿಕಾರಿಯಾದ ಡಾ. ತ್ರಿವೇಣಿ ರಮೇಶ್,ನಿತಿನ್ ಅಂಗರಾಜೆ,ಸತೀಶ್ ಮುರುವ, ಮಾರಪ್ಪ ಸುವರ್ಣ,ರಾಜೇಶ್ ಬಲ್ಯ,ಬಾಲಕೃಷ್ಣ ದೇಲಬೆಟ್ಟು, ಹಾಗೂ ಯುವವಾಹಿನಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *