Breaking
18 May 2026, Mon

ಸಿಡಿಲು ಹಾನಿಗೊಳಗಾದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಶಾಸಕ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ: ಸಿಡಿಲು ಬಡಿದು ಹಾನಿಗೊಳಗಾದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವಸ್ಥಾನದ ದೇವರ ಗರ್ಭಗುಡಿಯ ಪ್ರಾಕಾರಕ್ಕೆ ತೀವ್ರ ಸ್ವರೂಪದ ಹಾನಿಯಾಗಿದ್ದು, ತಹಶಿಲ್ದಾರ್ ಮಂಜುನಾಥ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಶಾಸಕರು ಹಾನಿಗೊಳಗಾದ ಪ್ರದೇಶವನ್ನು ವೀಕ್ಷಿಸಿದರು. ಸಿಡಿಲಿನಿಂದ ಸಂಭವಿಸಿದ ನಷ್ಟದ ಸಂಪೂರ್ಣ ವಿವರವನ್ನು ತಕ್ಷಣ ಸಲ್ಲಿಸುವಂತೆ ಸೂಚಿಸಿದ ಅವರು, ತುರ್ತು ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ದೇವಸ್ಥಾನದ ಗರ್ಭಗುಡಿಯ ಪುನರ್ ನಿರ್ಮಾಣದ ಕುರಿತು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಶಾಸಕರು, ಮುಂದಿನ ಕ್ರಮಗಳ ಬಗ್ಗೆ ಪ್ರಶ್ನಾಚಿಂತನೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ದೇವಸ್ಥಾನದ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲು ಗುತ್ತು, ಟ್ರಸ್ಟಿಗಳಾದ ಶಿವರಾಮ ಶೆಟ್ಟಿ, ಲಾವಣ್ಯ ಬಲ್ಲಾಳ್, ಶಿವಪ್ಪ ಪೂಜಾರಿ, ಜಯನಾಯ್ಕ್, ಲಿಂಗಪ್ಪ ಪೂಜಾರಿ ಸೇರಿದಂತೆ ಪ್ರಮುಖರಾದ ಸುದರ್ಶನ ಬಜ, ಪ್ರಕಾಶ್ ಅಂಚನ್, ಶಾಂತಪ್ಪ ಪೂಜಾರಿ, ಧನಂಜಯ ಶೆಟ್ಟಿ ಸರಪಾಡಿ, ಶಶಿಕಾಂತ್ ಶೆಟ್ಟಿ ಆರ್ಮುಡಿ, ರಾಮಕೃಷ್ಣ ಮಯ್ಯ, ಸುರೇಖಾ ಹೆಗ್ಡೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಜಯರಾಮ ಅಡಪ ದೆಚ್ಚಾರು, ತಿಲಕ್ ಬಂಗೇರ, ಮೋನಪ್ಪ ಪೂಜಾರಿ, ಸಂಜೀವ ಪೂಜಾರಿ, ವಸಂತ ದೆಚ್ಚಾರು, ಆನಂದ ಪೂಜಾರಿ ಅಲ್ಲಂಗಾರು, ಸಂತೋಷ್ ಕುಲಾಲ್, ಸುಜಿತ್ ಕಡಮಾಜೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *