Breaking
11 May 2026, Mon

ಬೆಳ್ತಂಗಡಿ: ಕ್ಯಾಂಟೀನ್‌ನಲ್ಲಿ ವೇಶ್ಯಾವಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಮೂವರ ಬಂಧನ

ಬೆಳ್ತಂಗಡಿ: ಕ್ಯಾಂಟೀನ್ ನಲ್ಲಿ ಅಕ್ರಮ ವೇಶ್ಯಾವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ(55), ನಾವೂರು ನಿವಾಸಿ ಹುಸ್ಮಾನ್(38), ತಣ್ಣಿರುಪಂತ ಗ್ರಾಮದ ಕಲ್ಲೇರಿ ನಿವಾಸಿ ಹೈದಾರ್(45) ಎಂಬರನ್ನು ಬಂಧಿಸಲಾಗಿದೆ.

ತಾಲೂಕಿನ ಪೊಯ್ಯಗುಡ್ಡೆ ನಿವಾಸಿಯಾಗಿರುವ ಸುಂದರ್ ಶೆಟ್ಟಿ ಎಂಬವರು ಬೆಳ್ತಂಗಡಿಯ ಮೆಸ್ಕಾಂ ಕಚೇರಿ ಬಳಿ ಇರುವ ಕ್ಯಾ ಟೀನ್ ವೊಂದರಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಪೊಯ್ಯಗುಡ್ಡೆ ನಿವಾಸಿಯಾಗಿರುವ ಸುಂದರ್ ಶೆಟ್ಟಿ ಎಂಬವರು ಕ್ಯಾಂಟಿನ್ ನಡೆಸುತ್ತಿದ್ದರು.

ಈ ಕ್ಯಾಂಟಿನ್ ಭಾನುವಾರ ಮಾತ್ರ ರಜೆ ಇದ್ದು, ಈ ಸಮಯದಲ್ಲಿ ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ ಕ್ಯಾಂಟಿನ್ ಒಳಗಡೆ ಬೆಡ್ ರೂಂ, ಶೌಚಾಲಯ ವ್ಯವಸ್ಥೆ ಮಾಡಿಕೊಂಡು ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದರು. ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮೇ.10 ರಂದು ಮಧ್ಯಾಹ್ನ 3 ಗಂಟೆಗೆ ದಾಳಿ ಮಾಡಿದಾಗ ಈ ವೇಶ್ಯಾವಟಿಕೆ ಪ್ರಕರಣ ಬೆಳಕಿಗೆ ಬಂದಿದೆ. 29 ವರ್ಷದ ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ದಾಳಿ ವೇಳೆ ಮೊಬೈಲ್ ಫೋನ್, ಹಣ, ನಿರೋಧ ಗಳು ಪತ್ತೆಯಾಗಿದೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ .ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *