Breaking
27 Apr 2026, Mon

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್’ (ರಿ) ಮಿಜಾರು ದ.ಕ ಕರ್ನಾಟಕ ಇವರಿಂದ 71ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ

ಬಂಟ್ವಾಳ: ಶಿವನಗರ ಮೂಡುಶೆಡ್ಡೆ ನಿವಾಸಿಯಾದ ಇಂದಿರಾ ರೈ (43 ವ) ಅವರು ಎರಡು ಕಿಡ್ನಿ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಇವರ ಗಂಡನನ್ನು ಮೊದಲೇ ಕಳೆದುಕೊಂಡಿದ್ದಾರೆ ಇವರನ್ನು ನೋಡಿಕೊಳ್ಳುತ್ತಿದ್ದ ತಾಯಿ ಕೂಡ ಕಳೆದ ತಿಂಗಳು ನಿಧನರಾದರು. ವೈದ್ಯರು ತನ್ನ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಲು ಶಸ್ತ್ರಚಿಕಿತ್ಸೆಗೆ ಸುಮಾರು 10ಲಕ್ಷ ಮೊತ್ತದ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದು, ಬಡ ಕುಟುಂಬವಾಗಿರುವುದರಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಮನವಿ ನೀಡಿದ್ದರು.

ಇವರ ಮನವಿಗೆ ಸ್ಪಂದಿಸಿ ಎಡಪದವು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಗಂಗಾಧರ್ ಪೂಜಾರಿ ಇವರ ಹಸ್ತದಲ್ಲಿ 15000 ರೂಪಾಯಿಯ ಚೆಕ್ ನ್ನು ಶ್ರೀ ರಾಮ ಮಂದಿರ ಎಡಪದವು ಇಲ್ಲಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ತಂಡದ ಸಂಸ್ಥಾಪಕರಾದ ನವೀನ್ ಪಿ ಮಿಜಾರ್ ಅಧ್ಯಕ್ಷ ಸಂದೀಪ್ ಮಿಜಾರ್ ಕಾರ್ಯದರ್ಶಿ ದಯಾನಂದ ಉರ್ಕಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *