Breaking
24 Apr 2026, Fri

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶ್ರೀ ವೆಂಕಟರಮಣ ಸ್ವಾಮಿ ಶಾಲೆಗೆ ಶೇ.100 ಫಲಿತಾಂಶ

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ ಇಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ಒಟ್ಟು 119 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 68 ಮಂದಿ ವಿಶಿಷ್ಟ ಶ್ರೇಣಿ ಮತ್ತು 48 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರತ್ಯೂಷ್ ಜೆ.ಎಂ. 617/625 (98.72%), ರೋಹನ್ ಎಚ್.ಎಸ್. 612/625 (97.92%), ಅನನ್ಯ ಪಿ. ಭಟ್ ಹಾಗೂ ಅನುಷ್ಕ ಶೆಟ್ಟಿ 611/625 (97.76%), ಮೇಧಶ್ರೀ ಮತ್ತು ತನಿಶ್ ಆರ್. ಶೆಟ್ಟಿಗಾರ್ 610/625 (97.60%), ಭೂಮಿಕಾ ಎಸ್. ಶೆಟ್ಟಿ 609/625 (97.44%), ದಿವಿತ್ ಮತ್ತು ಶಾನ್ವಿ ಆರ್. ಸುವರ್ಣ 608/625 (97.28%), ಅನುಕ್ತ ಕೆ., ನಮನ್ ಪ್ರಭು ಮತ್ತು ಶ್ರೀಯ ಪ್ರಭು ಯು. 603/625 (96.48%), ಪ್ರಥ್ವಿನ್ ಹಾಗೂ ಆಯಿಷತುಲ್ ಅಸ್ಮಿನಾ 602/625 (96.32%), ತನ್ಮಯಿ ಡಿ. ಪೂಜಾರಿ 600/625 (96.00%), ಝೀಬಾ ಮರಿಯಂ ಫಾತಿಮಾ 597/625 (95.52%), ಕೆ. ಶ್ರೀಶ ವೈ. ಆಚಾರ್ಯ ಮತ್ತು ರಿತ್ವಿಕ್ ಮನೋಜ್ 595/625 (95.20%), ಮೇಘನಾ 594/625 (95.04%), ತೃಪ್ತಿ ಶೆಟ್ಟಿ 592/625 (94.72%), ಇಶಾ ಕೆ. 591/625 (94.56%) ಹಾಗೂ ಪ್ರೀತಮ್ ಆರ್. ಶೆಣೈ 590/625 (94.40%) ಅಂಕಗಳನ್ನು ಗಳಿಸಿದ್ದಾರೆ.

ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಎಸ್‌ವಿಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ. ರೇಖಾ ಶೆಣೈ, ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *