Breaking
23 Apr 2026, Thu

ನೆತ್ತರಕೆರೆಯ ಸರಕಾರಿ ಶಾಲಾ ನೂತನ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ : ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ, ದಿ.ವಸಂತಿ ವಿಠ್ಠಲ ಶೆಟ್ಟಿ ಮುಂಡಾಜೆಗುತ್ತು ಇವರ ಸ್ಮರಣಾರ್ಥ ಅವರ ಮಕ್ಕಳು ಕೊಡುಗೆಯಾಗಿ ನೀಡುವ ನೂತನ ನಾಲ್ಕು ಕೊಠಡಿ ನಿರ್ಮಾಣಕ್ಕೆ ಕುಟುಂಬಸ್ಥರ ಪರವಾಗಿ ಪ್ರಗತಿಪರ ಕೃಷಿಕ ಜ್ಯೋತಿಂದ್ರ ಶೆಟ್ಟಿ ಮುಂಡಾಜೆಗುತ್ತು ಶೀಲಾನ್ಯಾಸ ನೆರವೇರಿಸಿದರು.

ವೇದಮೂರ್ತಿ ಗಣೇಶ ಭಟ್ ಸುಜೀರು ಭೂಮಿ ಪೂಜೆಯ ವೈದಿಕ ವಿಧಿ ವಿದಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಪುದು ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜೀ, ದೇವಂದಬೆಟ್ಟು ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮುಕ್ತೇಸರ ನವೀನ ಚಂದ್ರ ಶೆಟ್ಟಿ ಮುಂಡಾಜೆ ಗುತ್ತು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ನೆತ್ತರಕೆರೆ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ ಸುರೇಶ ಭಂಡಾರಿ ಅರ್ಬಿ, ಭಾಸ್ಕರ ಕುಲಾಲ್, ಚಂದ್ರಹಾಸ ನೆತ್ತರಕೆರೆ, ಪುದು ಗ್ರಾ ಪಂ ಸದಸ್ಯರಾದ ಪಿ ಸುಬ್ರಮಣ್ಯ ರಾವ್, ಪದ್ಮನಾಭ ಶೆಟ್ಟಿ ಪುಂಚಮೆ, ಕಟ್ಟಡದ ಇಂಜಿನಿಯರ್ ಸುಧೀರ್ ಕುಮಾರ್ ಶೆಟ್ಟಿ, ಪುದು ಗ್ರಾ. ಪಂ. ಮಾಜಿ ಸದಸ್ಯ ಸಂತೋಷ್ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಸಿಲ್ವಿಯಾ ಬ್ರೇಗ್ಸ್ , ಸಹ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *