Breaking
21 Jun 2026, Sun

ಸ್ಕೂಟಿಗೆ ಬಸ್ ಡಿಕ್ಕಿ : ಬಾಲಕಿ ಸಾವು

ಉಡುಪಿ: ಕಾಪು ಸಾಯಿ ಸರ್ವಿಸ್‌ ಸ್ಟೇಷನ್‌ ಬಳಿ ಸ್ಕೂಟಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಹಸವಾರೆಯಾಗಿ ಪ್ರಯಾಣಿಸುತ್ತಿದ್ದ ಬಾಲಕಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ಸಾತ್ವಿ ಶೆಟ್ಟಿ (8) ಎಂದು ಗುರುತಿಸಲಾಗಿದೆ.

ತಂದೆಯೊಂದಿಗೆ ಬಂದಿದ್ದ ಸಾತ್ವಿ ಅವರು ಕಾಪು ಪೇಟೆಗೆ ಯಾವುದೋ ಸಾಮಗ್ರಿ ತರಲು ಹೋಗಿ ವಾಪಸ್ ಬರುತ್ತಿದ್ದ ವೇಳೆ, ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದಾಗ ತಡೆರಹಿತವಾಗಿ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಬಾಲಕಿ ಸ್ವಾತಿ ಮೃತಪಟ್ಟಿದ್ದಾರೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *