Breaking
19 Sep 2026, Sat

ಆಟೋ ಪಲ್ಟಿಯಾಗಿ ರಿಕ್ಷಾ ಚಾಲಕ ಸಾವು

ಬೆಳ್ತಂಗಡಿ : ತಾಲೂಕಿನ ಅಳದಂಗಡಿಯಲ್ಲಿ ಆಟೋ ಪಲ್ಟಿಯಾಗಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಇಂದು ( ಏ. 16) ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಹಾರಡ್ಡೆ ನಿವಾಸಿ ಡೀಕಯ್ಯ ಪೂಜಾರಿಯವರ ಪುತ್ರ ಆಟೋ ಚಾಲಕರಾದ ಸುಧಾಕರ (37) ಎಂದು ಗುರುತಿಸಲಾಗಿದೆ.

ಗುರುವಾಯನಕೆರೆ ಕಡೆಯಿಂದ ಅಳದಂಗಡಿ ಕಡೆ ಬಾಡಿಗೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ, ಅಳದಂಗಡಿ ಸತ್ಯದೇವತೆ ದೇವಸ್ಥಾನದ ಸಮೀಪದಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಆಟೋ ಪಲ್ಟಿಯಾಗಿದೆ.

ಗಂಭೀರವಾಗಿ ಗಾಯಗೊಂಡ ಸುಧಾಕರರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *