ಪ್ರಗತಿಪರ ಕೃಷಿಕ ನಾರಾಯಣ ಬಂಗೇರ ಎನಿಲಕೋಡಿ ನಿಧನ

ಬಂಟ್ವಾಳ : ಪಂಜಿಕಲ್ಲು ಗ್ರಾಮದ ಎನಿಲಕೋಡಿ ನಿವಾಸಿ, ಹಿರಿಯ ಪ್ರಗತಿಪರ ಕೃಷಿಕ ನಾರಾಯಣ ಬಂಗೇರ ಎನಿಲಕೋಡಿ (88ವ) ಇವರು ಅಸೌಖ್ಯದಿಂದ ಏ. 15 ರಂದು ತಡರಾತ್ರಿ ಸ್ವಗೃಹದಲ್ಲಿ ನಿಧನರಾದರು.

ನಾರಾಯಣ ಬಂಗೇರ ಅವರು ಪ್ರಗತಿಪರ ಕೃಷಿಕರಾಗಿ, ಕೊಯಿಲ ಗೋವಿಂದ ಬೆಟ್ಟ ಭಜನಾ ಮಂದಿರ ಟ್ರಸ್ಟ್ ಸದಸ್ಯರಾಗಿ, ರಾಯಿ ವಲಯ ಗಾಣಿಗರ ಸಂಘದ ಹಿರಿಯ ಸದಸ್ಯರಾಗಿ, ಪಂಜಿಕಲ್ಲು ಪದವು ನ್ಯಾಯಬೆಲೆ ಅಂಗಡಿ ಮುನ್ನಡೆಸುತ್ತಿದ್ದರು.

ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ಗಂಟೆ 10. 30ಕ್ಕೆ ಸ್ವಗೃಹ ಬಳಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಪುತ್ರಿ ಹಾಗೂ ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *