Breaking
29 May 2026, Fri

ಕುಡಿಯುವ ನೀರಿನ ವಿಚಾರಕ್ಕೆ ಜಗಳ: ಕೋಳಿಬಾಳಿನಿಂದ ಇರಿತ

ಬಂಟ್ವಾಳ: ನೆರೆಮನೆಯ ಇಬ್ಬರಿಗೆ ಕುಡಿಯುವ ನೀರಿನ ವಿಚಾರವಾಗಿ ಜಗಳ ನಡೆದು ಕೋಳಿಬಾಳ್‌ನಿಂದ ಇರಿದ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಎಂಬಲ್ಲಿ ನಡೆದಿದೆ.

ದಯಾನಂದ ಮಡಿವಾಳ ಮತ್ತು ವಸಂತ ಶೆಟ್ಟಿ ಅವರ ನಡುವೆ ಅಮ್ಟಾಡಿ ಗ್ರಾಮ ಪಂಚಾಯತ್‌ನಿಂದ ಕುಡಿಯುವ ನೀರು ಪೂರೈಕೆಯ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಈ ವೇಳೆ ವಸಂತ ಶೆಟ್ಟಿ ಅವರು ಕೋಳಿಬಾಳಿನಿಂದ ದಯಾನಂದ ಮಡಿವಾಳ ಅವರಿಗೆ ಇರಿದಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ದಯಾನಂದ ಮಡಿವಾಳ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *