Breaking
19 Sep 2026, Sat

ಅಲ್ಪಕಾಲದ ಅಸೌಖ್ಯದಿಂದ ಗೋವಿಂದ ಭಟ್ ಕಲ್ಲಡ್ಕ ನಿಧನ

ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಆರಂಭದಿಂದಲೇ 30 ವರ್ಷಕ್ಕೂ ಹೆಚ್ಚು ಕಾಲ ಹಿಂದಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಭಟ್ ಕೆ(75 ವ) ಮಾ. 31 ರಂದು  ಖಾಸಗಿ ಆಸ್ಪತ್ರೆಯಲ್ಲಿ ‌ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. 

ಗೋವಿಂದ ಭಟ್ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಗುರುಗಳಾಗಿದ್ದು, ಪೌರಾಣಿಕ ಪ್ರಸಂಗಗಳ ಬಗ್ಗೆ ವಿಶೇಷ ‌ಅನುಭವ ಹೊಂದಿದ್ದರು. ಮಕ್ಕಳ ತಂಡಗಳನ್ನು ಕಟ್ಟಿಕೊಂಡು ಪ್ರದರ್ಶನ ನಡೆಸುತ್ತಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಇವರು ಹಲವು ಜಬಾಬ್ದಾರಿಗಳನ್ನು ನಿರ್ವಹಿಸಿದ್ದರು. ಬಾಳ್ತಿಲ ಕಾಂಪ್ರಬೈಲಿನಲ್ಲಿ ವಾಸವಾಗಿದ್ದು ಕೃಷಿಕರಾಗಿಯೂ ಜನಾನುರಾಗಿಯಾಗಿದ್ದರು.

Leave a Reply

Your email address will not be published. Required fields are marked *