Breaking
18 Mar 2026, Wed

ವಿದ್ಯುತ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ಸಾವು

ಬೆಳ್ತಂಗಡಿ: ತಾಲೂಕಿನ ಕೊಕ್ಕಡದಲ್ಲಿ ಕಾರ್ಮಿಕರೊಬ್ಬರ ಮೇಲೆ ವಿದ್ಯುತ್‌ ಕಂಬ ಬಿದ್ದು ಮೃತಪಟ್ಟ ಘಟನೆ ಮಾ. 17 ರಂದು ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಕೊಕ್ಕಡ ಗ್ರಾಮದ ಮಹಾವೀರ ಕಾಲೋನಿ ನಿವಾಸಿ ಶಿವಪ್ಪ (40) ಎಂದು ಗುರುತಿಸಲಾಗಿದೆ.

ಗುತ್ತಿಗೆದಾರ ಪುರುಷೋತ್ತಮ ಎಂಬವರ ಬಳಿ ಕಳೆದ ಹಲವು ವರ್ಷಗಳಿಂದ ಶಿವಪ್ಪ ಅವರು ಕೆಲಸ ಮಾಡುತ್ತಿದ್ದರು.

ಮಾ. 17 ರಂದು ಕೊಕ್ಕಡದ ಶ್ರೀ ರಾಮ ಭಜನಾ ಮಂದಿರದ ಬಳಿ ವಿದ್ಯುತ್ ಕಂಬ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದ ವೇಳೆ ಅವರು ಸುರಕ್ಷತಾ ಸಾಧನಗಳನ್ನು ಧರಿಸದೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಕಂಬ ಅವರ ಮೈಮೇಲೆ ಬಿದ್ದಿದೆ. ಪರಣಾಮ ಗಂಭೀರವಾಗಿ ಗಾಯಗೊಂಡ ಅವರು ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *