ಬೆಳ್ತಂಗಡಿ : ನೆರಿಯ ಗ್ರಾಮದ ಆಲಂಗಾಯಿಯಲ್ಲಿರುವ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಗೆ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ಸಿ.ಕೆ ರೋಹಿಣಿ ಅವರು ಮಾ.8 ರಂದು ಭೇಟಿ ನೀಡಿದರು.

ಈ ವಸತಿ ಶಾಲೆಯ ಆದಿವಾಸಿ ಮಕ್ಕಳೊಂದಿಗೆ ಬೆರೆತು , ಮಾತುಕತೆ ನಡೆಸಿ , ಮಕ್ಕಳಿಗೆ ಕಾನೂನಿನ ಪಾಠ ಮಾಡಿದರು. ಸರ್ಕಾರದ ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡು , ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಏರಬೇಕು ಆಗ ಸರ್ಕಾರದ ಕಾರ್ಯಕ್ರಮಗಳು ಸಾರ್ಥಕತೆಯಾಗುತ್ತದೆ ಎಂದರು. ಮಧ್ಯಾಹ್ನ ಮಕ್ಕಳ ಜೊತೆಗೆ ಊಟ ಮಾಡಿದ ಡಿವೈಎಸ್ಪಿ ರವರು ಹಳೆಯ ವಸತಿ ನಿಲಯ ಕಟ್ಟಡವನ್ನು ವೀಕ್ಷಣೆ ಮಾಡಿದರು. ಜೊತೆಗೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ವಸತಿಶಾಲಾ ಕಟ್ಟಡವನ್ನು ವೀಕ್ಷಿಸಿ ಸಂತಸಗೊಂಡರು. ನೂತನ ಕಟ್ಟಡದ ಉದ್ಘಾಟನೆಯನ್ನು ಆದಷ್ಟು ಬೇಗ ನಡೆಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಸುಮಾರು 3 ಘಂಟೆಗಳ ಕಾಲ ಮಕ್ಕಳ ಜೊತೆಗೆ ಬೆರೆತರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಪೋಲಿಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸಮರ್ಥ್, ಧರ್ಮಸ್ಥಳ ಪೋಲಿಸ್ ಠಾಣೆಯ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಹಾಸ್ಟೆಲ್ ಸಿಬ್ಬಂದಿಗಳು ಉಪಸ್ಥಿತರಿದ್ದರು.







