Breaking
2 Mar 2026, Mon

ಜಾತಿ ಪ್ರಮಾಣ ಪತ್ರಕ್ಕೆ ದಾಖಲೆ ಸಡಿಲಿಕೆ ಕೋರಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿದ ಪವನ್ ಕುಮಾರ್ ಶಿರ್ವ

ಬೆಂಗಳೂರು, ಮಾರ್ಚ್ 2: ಡಿ. ಕೆ. ಶಿವಕುಮಾರ್ ಹಾಗೂ ಕೃಷ್ಣ ಬೈರೆ ಗೌಡ ಅವರನ್ನು ಭೋವಿ ಮುಖಂಡ ಪವನ್ ಕುಮಾರ್ ಶಿರ್ವ ಅವರು ಬೆಂಗಳೂರಿನಲ್ಲಿ ಭೇಟಿ ಮಾಡಿ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲೆ ಸಡಿಲಿಕೆ ಕುರಿತು ಮನವಿ ಸಲ್ಲಿಸಿದರು.

ಭೇಟಿ ವೇಳೆ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಪಡೆಯುವ ಸಂದರ್ಭದಲ್ಲಿ ಎದುರಾಗುತ್ತಿರುವ ತೊಂದರೆಗಳನ್ನು ಪವನ್ ಕುಮಾರ್ ಶಿರ್ವ ಅವರು ವಿವರವಾಗಿ ಪ್ರಸ್ತಾಪಿಸಿದರು. ವಿಶೇಷವಾಗಿ ಜಾತಿ ಪ್ರಮಾಣ ಪತ್ರಕ್ಕೆ ಅಗತ್ಯವಿರುವ ವಲಸೆ ಪ್ರಮಾಣ ಪತ್ರದ ಶರತ್ತಿನಲ್ಲಿ ಸಡಿಲಿಕೆ ನೀಡಬೇಕು ಹಾಗೂ ದಾಖಲೆ ಸಲ್ಲಿಸುವಾಗ ವಲಸೆ ಪ್ರಮಾಣ ಪತ್ರವನ್ನು ಕೈಬಿಡುವಂತೆ ಅವರು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವರು, ಎರಡು ಜಿಲ್ಲೆಗಳಲ್ಲಿ ಈ ವಿಷಯವಾಗಿ ಜನರು ಬಹಳ ಕಷ್ಟ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು. ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಸೂಚನೆ ನೀಡಿ, ಯಾವುದೇ ತೊಂದರೆ ಉಂಟಾದರೆ ತಮ್ಮ ಗಮನಕ್ಕೆ ತರಲು ಹೇಳಿದರು. ಸಮಸ್ಯೆಗೆ ತಕ್ಕ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *