ಬಂಟ್ವಾಳ: 2024-25 ನೇ ಸಾಲಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪ್ರೀಮಿಯಂ ಪಾವತಿಸಿದ ರೈತರಿಗೆ ಬಿಡುಗಡೆಯಾದ ಪರಿಹಾರದಲ್ಲಿ ತುಂಬಾ ಗೊಂದಲಗಳು ಆಗಿದ್ದು ಈ ಬಗ್ಗೆ ತೋಟಾಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಟೆಂಡರ್ ವಹಿಸಿದ ಎಜೆನ್ಸಿಗಳಲ್ಲಿ ವಿಚಾರಿಸಿದಾಗ ಮಳೆ ಮಾಪನ ಕೇಂದ್ರಗಳಲ್ಲಿ ಬಿದ್ದಿರುವ ಮಳೆಯ ಪ್ರಮಾಣದಲ್ಲಿ ಪರಿಹಾರ ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ .

ಆದರೆ ಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿರುವ ಮಳೆ ಮಾಪನ ಕೇಂದ್ರಗಳು ಚಲಾವಣೆ ಇಲ್ಲದೇ ದುಸ್ಥಿತಿಯಲ್ಲಿ ಇರುವುದಾಗಿ ತಿಳಿದು ಬಂದಿದೆ.
ಇದರಿಂದಾಗಿ ಕರಾವಳಿಯ ಕೆಲವೊಂದು ತಾಲೂಕುಗಳಲ್ಲಿ ರೈತರು ಪಾವತಿಸಿದ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ದೊರೆತ್ತಿದೆ . ಇದರಿಂದ ಸಾವಿರಾರು ರೈತರಿಗೆ ಸಮರ್ಪಕ ಪರಿಹಾರ ದೊರಕದೇ ರೈತರು ಸರಕಾರದ ಅಸಮರ್ಪಕ ಧೋರಣೆಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಹಾಗೂ ಇದನ್ನೇ ನಂಬಿಕೊಂಡಿರುವ ರೈತರು ಕಂಗಲಾಗಿದ್ದಾರೆ.

ಈ ಎಲ್ಲಾ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿರುವ ಮಳೆ ಮಾಪನ ಕೇಂದ್ರಗಳನ್ನು ಪಂಚಾಯತ್ ಮಟ್ಟದ ಕಂದಾಯ ಅಥವಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಸುಪರ್ಧಿಯಲ್ಲಿ ಪ್ರತಿ ತಿಂಗಳಿಗೊಮ್ಮೆ ಪರಿವೀಕ್ಷಣೆ ಮಾಡಿಸಿ ಸುಸ್ಥಿತಿಯಲ್ಲಿ ಇಡಲು ಅಗತ್ಯ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವಂತೆ ಈ ಮೂಲಕ ಕರ್ನಾಟಕ ಸರಕಾರದ ಮಾನ್ಯ ತೋಟಾಗಾರಿಕೆ ಸಚಿವರಿಗೆ ಸಿದ್ದಕಟ್ಟೆ ಪಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ. ಅಧ್ಯಕ್ಷರಾದ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.







