Breaking
8 Feb 2026, Sun

ಸಹಕಾರ ಶಿರೋಮಣಿ–2025 ಪ್ರಶಸ್ತಿಗೆ ಪ್ರಭಾಕರ ಪ್ರಭು ಆಯ್ಕೆ

ಬಂಟ್ವಾಳ: ಕರ್ನಾಟಕ ರಾಜ್ಯದ ಕನ್ನಡ ಪ್ರಭಾ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ಚಾನೆಲ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ, ರಾಜ್ಯ ಮಟ್ಟದಲ್ಲಿ ಅವರ ವತಿಯಿಂದ ನೀಡಲಾಗುವ “ಸಹಕಾರ ಶಿರೋಮಣಿ – 2025” ಪ್ರಶಸ್ತಿಗೆ ಪ್ರಭಾಕರ ಪ್ರಭು ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಯನ್ನು ಫೆ. 07 ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತದೆ.

ಕಳೆದ 5 ವರ್ಷಗಳಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಗಿ ನಿರಂತರವಾಗಿ ಸಹಕರಿಸಿ, ಸಹಕಾರ ಕ್ಷೇತ್ರದ ಹೊರತಾಗಿಯೂ ಹಲವಾರು ಜನಪಯೋಗಿ ಕೆಲಸ ಕಾರ್ಯಗಳನ್ನು ಮಾಡಿರುವುದರ ಉದ್ದೇಶಕ್ಕಾಗಿ ಈ ಗೌರವಾನ್ವಿತ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಿದ್ದಾರೆ.

Leave a Reply

Your email address will not be published. Required fields are marked *