ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಕೊಡಂಗೆ ವೀರ ವಿಕ್ರಮ ಕಂಬಳ ಕರೆಯನ್ನು ಪೂಂಜಾ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಕಾಶ್ ಆಚಾರ್ಯ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಗೊಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಗುತ್ತಿನಾರ್ ಜಯರಾಮ್ ಶೆಟ್ಟಿ ಪ್ರಭಾಕರ ಪ್ರಭು, ಡಾ. ಸುದೀಪ್ ಕುಮಾರ್, ಅವಿಲ್ ಮೆನೇಜಸ್, ನಿತ್ಯಾನಂದ ಪೂಜಾರಿ ಕೆಂತಲೆ, ರಾಯಿ ಶೀತಲ ರಾಜೇಶ್ ಶೆಟ್ಟಿ, ಅನಿಲ್ ಶೆಟ್ಟಿ ಓಡಿಪರಗುತ್ತು ಎಲ್ಲೂರು ಮೀರಾರೋಡ್, ಪದ್ಮರಾಜ್ ಬಲ್ಲಾಳ್, ಸ್ಥಳದಾನಿಗಳಾದ ಒಬಯ್ಯ ಪೂಜಾರಿ ಹಾಗೂ ಕೊರಗಪ್ಪ ಪೂಜಾರಿ, ಹರೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮುಂಬೈ, ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಪೊಡುಂಬ ಹಾಗೂ ಸಮಿತಿಯ ಸರ್ವ ಸದಸ್ಯರು, ಗಣ್ಯರು ಹಾಗೂ ಕಂಬಳಾಭಿ ಮಾನಿಗಳು ಉಪಸ್ಥಿತರಿದ್ದರು.