ಕಟಪಾಡಿ: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ
ಆನಂದತೀರ್ಥ ಪ.ಪೂ ಕಾಲೇಜು ಮತ್ತು ಶ್ರೀ ವಿಶ್ವೇಶತೀರ್ಥ
ಮಹಾವಿದ್ಯಾಲಯ ಪದವಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಕಾಲೇಜು
ಕ್ರೀಡಾಂಗಣದಲ್ಲಿ ನಡೆಯಿತು.
ಅದಮಾರು ಪಿ.ಪಿ.ಸಿ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಜಿತ್
ಶೆಟ್ಟಿ ಎರ್ಮಾಳು, ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳಿಗೆ
ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಕ್ರೀಡೆಯೂ ಕೂಡ ಅಷ್ಟೇ
ಮುಖ್ಯ. ವಿದ್ಯಾರ್ಥಿಗಳು ಪ್ರತೀ ವರ್ಷ ನಡೆಯುವ ಇಂತಹ
ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು
ಪ್ರದರ್ಶನ ಮಾಡಲು ಇರುವ ಉತ್ತಮ ಅವಕಾಶವನ್ನು
ಬಳಸಿಕ್ಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಖಜಾಂಜಿ
ಲಕ್ಷ್ಮೀನಾರಾಯಣ ಉಪಾಧ್ಯಯ ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭ
ಹಾರೈಸಿದರು.
ಸಮಾರಂಭದಲ್ಲಿ ಪ್ರಿನ್ಸಿಪಲ್ ವಿಜಯ್ ಪಿ ರಾವ್, ವೈಸ್ ಪ್ರಿನ್ಸಿಪಲ್ ಕಮಲಾಕ್ಷೀ
ಪ್ರಕಾಶ್, ಪದವಿ ಕಾಲೇಜಿನ ಸಂಯೋಜಕಿ ರಕ್ಷಿತಾ, ದೈಹಿಕ ಶಿಕ್ಷಣ
ನಿರ್ದೇಶಕ ವಕ್ಷತ್ ಸಾಲಿಯಾನ್, ಆನಂದತೀರ್ಥ ವಿದ್ಯಾಲಯದ ದೈ.ಶಿ.
ಶಿಕ್ಷಕರಾದ ಸಂತೋಷ್ ಕುಮಾರ್ ಶೆಟ್ಟಿ, ಸಚಿನ್ ಉಪಸ್ಥಿತರಿದ್ದರು.
ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರೂಪಿಸಿ, ಲಾವಣ್ಯ
ಸ್ವಾಗತಿಸಿ, ದ್ವಿತೀಯ ಪಿಯುಸಿ ಶ್ರೀಶ ವಿಠಲ ವಂದಿಸಿದರು