ಬಂಟ್ವಾಳ : ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಕುಕ್ಕೇಡಿ ಶ್ರೀ ಕೋಣಂದಾಯ-ಮಹಿಷಂತಾಯ ದೈವಸ್ಥಾನ ಕೋಣಂದಪಾಡಿಯಲ್ಲಿ ಫೆ. 20 ರಂದು ನಡೆಯಲಿರುವ ಕೋಣಂದಪಾಡಿ ನೇಮೋತ್ಸವ, ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕಗಳ ಆಮಂತ್ರಣ ಪತ್ರಿಕೆಯು ಜ. 2 ರಂದು ಬಿಡುಗಡೆಗೊಂಡಿತು.

ಗ್ರಾಮದ ಹಿರಿಯರೆಲ್ಲರೂ ಸೇರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ್ದು ಬಳಿಕ ಗ್ರಾಮದ ಎಲ್ಲಾ ಗ್ರಾಮಸ್ಥರು ಒಟ್ಟು ಸೇರಿ ದೈವಗಳ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಂಡರು.

ಈ ಸಂದರ್ಭದಲ್ಲಿ ದೇವಣ್ಣ ಗೌಡ ಕುಕ್ಕೇಡಿ, ಸೀತಾರಾಮ್ ಶೆಟ್ಟಿ ಅಂಗರಕುಮೇರು, ಗಂಗಾಧರ ಗೌಡ ಕುಕ್ಕೇಡಿ, ಮುಕೇಶ್ ಶೆಟ್ಟಿ ಕುಕ್ಕೇಡಿ, ಯಶೋಧರ ಶೆಟ್ಟಿ ಕಾಫಿಕಾಡ್, ರತೀಶ್ ಶೆಟ್ಟಿ ಕುಕ್ಕೇಡಿ,ಪ್ರಸಾದ್ ಶೆಟ್ಟಿ ಕಾಫಿ ಕಾಡ್, ಡಾಕಾಯ ಗೌಡ ಕುಕ್ಕೇಡಿ,ದೀಕ್ಷಿತ್ ಶೆಟ್ಟಿ ಕುಕ್ಕೇಡಿ, ಸಂಜೀವ ಗೌಡ ಎಲ್ಪೇಲ್, ಅಶೋಕ್ , ಜಯಂತ, ಗೋಪಾಲ, ಯಶೋಧರ, ಕೃಷ್ಣ , ಚಂದ್ರಹಾಸ, ಗಣೇಶ್ ಶೆಟ್ಟಿ ಅತ್ರಜಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






