Breaking
10 May 2026, Sun

ಜೈಲಿಂದ ಹೊರಬಂದ ಮರುದಿನವೇ ಕಳ್ಳತನ: ಮೂವರು ಆರೋಪಿಗಳ ಬಂಧನ

ಬೆಂಗಳೂರು : ಕಳ್ಳತನ ಹಾಗೂ ದರೋಡೆ ಪ್ರಕರಣದಲ್ಲಿ ಜೈಲು ಅನುಭವಿಸಿದ್ದ ಮೂವರು, ಜೈಲಿನಲ್ಲಿ ಸ್ನೇಹಿತರಾಗಿ ಹೊರಬಂದ ಬಳಿಕ ಮತ್ತೆ ಒಟ್ಟಾಗಿ ಸೇರಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತಿಲಕ ನಗರ ನಿವಾಸಿ, ಬಾಲರಾಜ್‌(45), ಆಡುಗೋಡಿಯ ಗೌರವ್‌(21) ಮತ್ತು ಪ್ರವೀಣ್‌(26) ಎಂದು ಗುರುತಿಸಲಾಗಿದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳು , ಮರುದಿನವೇ ಕಳ್ಳತನ ಮಾಡಿ ಪುನಃ ಜೈಲು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರಿಂದ 31.27 ಲಕ್ಷ ಮೌಲ್ಯದ 257 ಗ್ರಾಂ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *