ಬೆಳ್ತಂಗಡಿ : ಬಂದಾರು ಗ್ರಾಮದ ಮೈರೋಳ್ತಡ್ಕ ದ.ಕ.ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವದ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಡಿ.13 ರಂದು ಶಾಲಾ ವಠಾರದಲ್ಲಿ ನಡೆಯಿತು.
ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಅವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಶಾಲಾ ಕೊಠಡಿ ನೀಲ ನಕಾಶೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ನೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ನಿರುoಬುಡ, ಅಂಡೆಕೇರಿ ಜುಮ್ಮಾ ಮಸೀದಿ ಧರ್ಮ ಗುರುಗಳಾದ ಶಫೀ ಅಹ್ಮನಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಪೊಲೀಸ್ ಪಿ.ಎಸ್ ವೆಂಕಪ್ಪ, ಹಿರಿಯ ವಿದ್ಯಾರ್ಥಿ ಅಂಚೆ ಇಲಾಖೆಯ ಸಹಾಯಕ ಅಧಿಕ್ಷಕರು ಮೋಹನ್ ಶೆಟ್ಟಿ ಬಾಂಗೇರು, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ, ಶ್ರೀಮತಿ ಸುಚಿತ್ರಾ ಮುರ್ತಾಜೆ, ಕುಪ್ಪೆಟ್ಟಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶ್ರೀಮತಿ ವಾರಿಜ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಚoದ್ರಾವತಿ ಪ್ರಸ್ತಾವನೆಗೈದರು.

ಈ ವೇಳೆ ಶಾಲೆಗೆ ಬೆಂಚು, ಡೆಸ್ಕ್ ಕೊಡುಗೆ ನೀಡಿದ ಲೀಲಾವತಿ ಗಿರಿಯಪ್ಪ ಪೂಜಾರಿ ಸೊರಗೆದಡಿ, ಶ್ರೀಮತಿ ಮತ್ತು ಬಾಬು ಗೌಡ ಮಡ್ಯಲಕಂಡ, ನಡುಮಜಲು ಕುಟುಂಬಸ್ಥರು, ಶ್ರೀಮತಿ ವಾರಿಜ ಮತ್ತು ಧರ್ಣಪ್ಪ ಪೂಜಾರಿ ನೂಜಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಪ್ರಾರ್ಥನೆಗೈದು, ಶಿಕ್ಷಕರಾದ ದಿನೇಶ್ ಸ್ವಾಗತಿಸಿ, ಸಹಶಿಕ್ಷಕಿ ರಾಜಶ್ರೀ ನಿರೂಪಿಸಿ, ಶಿಕ್ಷಕರಾದ ಶ್ರೀಧರ್ ಧನ್ಯವಾದವಿತ್ತರು.

ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಬಹುಮಾನ ವಿಜೇತರ ಪಟ್ಟಿಯನ್ನು ಪ್ರಭು ನಾಯ್ಕ ಎಲ್, ಸುಶೀಲಾ, ಅರ್ಚನಾ, ವೀಕ್ಷಿತಾ ಇವರುಗಳು ವಾಚಿಸಿದರು. ತೀರ್ಥ ಕುಮಾರಿ ಸಾoಸ್ಕೃತಿಕ ಸಂಯೋಜನೆ ಮಾಡಿದರು. ಪೋಷಕರು, ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ ಸ್ಪರ್ಧೆಯು ನಡೆಯಿತು.




