Breaking
26 Sep 2026, Sat

ಮಂಗಳೂರು: ಛಾಯಾಗ್ರಾಹಕ ಸ್ಟ್ಯಾನ್ಲಿ ಬಂಟ್ವಾಳ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಮಂಗಳೂರು : ಬಿಕರ್ನಕಟ್ಟೆ ಜಯಶ್ರೀ ಗೇಟ್ ನಿಂದ ಮಾರೋಲಿ ದೇವಸ್ಥಾನ ಮತ್ತು ಪಂಪವೆಲ್ ನ ಸಂಪರ್ಕ ರಸ್ತೆಯಲ್ಲಿ ನ.24 ರಂದು ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿದ್ದು ಛಾಯಾ ಗ್ರಾಹಕ ಸ್ಟ್ಯಾನ್ಲಿ ಬಂಟ್ವಾಳ್ ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ರಾತ್ರಿ ಸುಮಾರು 8.25 ಹೊತ್ತಿಗೆ ಸ್ಟ್ಯಾನ್ಲಿ ಬಂಟ್ವಾಳ ಮತ್ತು ಅವರ ಮಕ್ಕಳ ಜೊತೆ ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ವಿದ್ಯುತ್‌ ತಂತಿ ಬಿದ್ದಿತ್ತು. ತಕ್ಷಣವೇ ಕೆ ಇ ಬಿ ಜೆ ಇಯವರಿಗೆ ಕರೆ ಮಾಡಿ ತಿಳಿಸಿದರು. ಇನ್ನೂ ಮುಂದೆ ನೋಡುವಾಗ ಆ ತಂತಿ ಯಾ ಇನ್ನೊಂದು ದೊಡ್ಡ ಭಾಗ ರಸ್ತೆಯಲ್ಲೇ ಬಿದ್ದಿದ್ದು ಪುನಃ ಜೆ ಇ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸುಮಾರು 5 ನಿಮಿಷದ ಬಳಿಕ ಲೈನ್ ಆಫ್ ಮಾಡಲಾಯಿತು.‌

ಈ ಸಂದರ್ಭ ಸ್ಟ್ಯಾನ್ಲಿ ಅವರು ರಸ್ತೆಯಲ್ಲೇ ನಿಂತು ವಾಹನ ಮತ್ತು ಪಾದಚಾರಿಗಳಿಗೆ ಜಾಗರೂಕತೆಯಿಂದ ಹೋಗಲು ಸೂಚಿಸಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಅವರು “ನಾನು ಈ ಬಗ್ಗೆ ಎಚ್ಚರಿಕೆ ವಹಿಸದೇ ಇದ್ದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಯಾವುದೇ ಸ್ಥಳಗಳಲ್ಲಿ ಇಂತಹ ಸಮಸ್ಯೆ ಬಂದರೆ ಕೂಡಲೇ ಸ್ಥಳೀಯ ಮೆಸ್ಕಾಂ ಇಲಾಖೆ ಸ್ಪಂದನೆ ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *