Breaking
10 May 2026, Sun

ಮಂಗಳೂರು : ರಸ್ತೆ ಅಪಘಾತ; ದ್ವಿಚಕ್ರ ವಾಹನ ಸವಾರ ಸಾವು

ಮಂಗಳೂರು : ಅಡ್ಯಾರ್-ವಳಚ್ಚಿಲ್ ಮಧ್ಯೆ ಇರುವ ಸೋಮನಾಥ ಕಟ್ಟೆಯ ಬಳಿ ನ. 24 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಅಡ್ಯಾ‌ರ್ ಕಣ್ಣೂರು ನಿವಾಸಿ ಇಕ್ಬಾಲ್ (42)ಎಂದು ಗುರುತಿಸಲಾಗಿದೆ.

ಇಕ್ಬಾಲ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ವಳಚ್ಚಿಲ್‌ನಿಂದ ಸೋಮನಾಥ ಕಟ್ಟೆ ಬಳಿ ಬರುವಾಗ ಪಂಪ್‌ವೆಲ್‌ನಿಂದ ವಳಚ್ಚಿಲ್‌ನತ್ತ ತೆರಳುತ್ತಿದ್ದ ಬೈಕ್‌ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *